ಸುಮಲತಾ ಅಂಬರೀಷ್ ಅವರ ಧೈರ್ಯವನ್ನು ಮೆಚ್ಚುವಂಥದ್ದು: ಶೋಭಾ ಕರಂದ್ಲಾಜೆ…

230
firstsuddi

ಬೆಂಗಳೂರು : ಸುದ್ದಿಗಾರರೊಂದಿಗೆ ಮಾತನಾಡಿದ ಶೋಭಾ ಕರಂದ್ಲಾಜೆ ಅವರು ಸುಮಲತಾ ಅಂಬರೀಷ್ ಅವರ ಧೈರ್ಯವನ್ನು ಮೆಚ್ಚುವಂಥದ್ದು. ಅವರು ಮಂಡ್ಯದ ಗಂಡುಮಗಳು. ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರಿಗೆ ಅಂಬರೀಷ್  ಅವರ ಮೇಲೆ ಅಭಿಮಾನ ಇದ್ದರೆ ತಮ್ಮ ಮಗ ನಿಖಿಲ್ ಸಲ್ಲಿಸುವ ನಾಮಪತ್ರವನ್ನು ಹಿಂದಕ್ಕೆ ಪಡೆಯುವಂತೆ ಹೇಳಲಿ. ಹತಾಶೆಯಿಂದ ಕುಮಾರಸ್ವಾಮಿಯವರು ಚಲನಚಿತ್ರ ನಟರ ಬಗ್ಗೆ ಹಗುರವಾಗಿ ಮಾತನಾಡುತ್ತಿದ್ದಾರೆ. ಈ ರೀತಿಯ ನಡೆ ಕುಮಾರಸ್ವಾಮಿ ಅವರಿಗೆ ಶೋಭೆ ತರುವುದಿಲ್ಲ. ಚುನಾವಣೆ ಒಂದು ಯುದ್ಧ ಆದರೆ ಉಡುಪಿ-ಚಿಕ್ಕಮಗಳೂರು ಮೈತ್ರಿ ಅಭ್ಯರ್ಥಿ ಪ್ರಮೋದ್ ಮಧ್ವರಾಜ್ ಯಾಕೆ ಜೆಡಿಎಸ್ ಗೆ ಹೋಗಿದ್ದಾರೆ ಎಂದು ಗೊತ್ತಿಲ್ಲ ಎಂದರು.