ಶ್ರೀಲಂಕಾ : ಸರಣಿ ಬಾಂಬ್ ಸ್ಪೋಟಗೊಂಡು ಕನ್ನಡಿಗರ ನಿಧನಕ್ಕೆ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರ ಸಂತಾಪ…

181
firstsuddi

ಬೆಂಗಳೂರು : ಶ್ರೀಲಂಕಾದಲ್ಲಿ ಸರಣಿ ಬಾಂಬ್ ಸ್ಪೋಟಗೊಂಡು ಕನ್ನಡಿಗರ ನಿಧನಕ್ಕೆ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಅವರು ಟ್ವಿಟರ್ ಮೂಲಕ ಸಂತಾಪ ಸೂಚಿಸಿದ್ದಾರೆ.ಶ್ರೀಲಂಕಾದಲ್ಲಿ ಭಯೋತ್ಪಾದಕರು ಬಾಂಬ್ ಸ್ಫೋಟ ನಡೆಸಿ 200 ಕ್ಕೂ ಹೆಚ್ಚು ಅಮಾಯಕರ ಬಲಿ ಪಡೆದ ಹೇಯ ಕೃತ್ಯವನ್ನು ತೀವ್ರವಾಗಿ ಖಂಡಿಸುತ್ತೇನೆ. ಕನ್ನಡಿಗರಾದ ಹನುಮಂತರಾಯಪ್ಪ ಹಾಗೂ ರಂಗಪ್ಪನವರು ಸೇರಿ ಉಗ್ರರ ಕುಕೃತ್ಯದಲ್ಲಿ ಬಲಿಯಾದವರಿಗೆ ನನ್ನ ದುಃಖತಪ್ತವಾದ ಸಂತಾಪವನ್ನು ಸಲ್ಲಿಸುತ್ತೇನೆ. ಶ್ರೀಲಂಕಾದಲ್ಲಿ ನಡೆದ ಈ ಹೇಯ ಕೃತ್ಯದಲ್ಲಿ ಗಾಯಗೊಂಡಿರುವವರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಹಾಗೂ ಸಂಪರ್ಕಕ್ಕೆ ಸಿಗದೇ ಕಣ್ಮರೆಯಾಗಿರುವ ಕನ್ನಡಿಗರು, ಭಾರತೀಯರು ಶೀಘ್ರವಾಗಿ ಮರಳಿ ಬರುವಂತಾಗಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.