ನವದೆಹಲಿ : ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರ “ಚೌಕೀದಾರ್ ಚೋರ್ ಹೈ” ಎಂದು ಸುಪ್ರೀಂ ಕೋರ್ಟ್ ಒಪ್ಪಿದೆ ಎಂಬ ಹೇಳಿಕೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಪ್ರತಿಕ್ರಯಿಸಿದ್ದು, ಮೋದಿಯವರನ್ನು “ಚೌಕೀದಾರ್ ಚೋರ್ ಹೈ” ಎಂದು ಸುಪ್ರೀಂ ಕೋರ್ಟ್ ಯಾವಾಗ ಹೇಳಿದೆ ಎಂದು ರಾಹಲ್ ಗಾಂಧಿ ಅವರ ಪರ ವಾಧಮಂಡನೆ ಮಾಡುತ್ತಿದ್ದ ಅಭಿಷೇಕ್ ಮನು ಸಿಂಘ್ವಿ ಅವರನ್ನು ಪ್ರಶ್ನಿಸಿದೆ. ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್ ಹೆಸರನ್ನು ತಪ್ಪಾಗಿ ಬಳಸಿಕೊಂಡಿರುವುದು ಸರಿಯಲ್ಲ ಎಂದು ರಾಹುಲ್ ಗಾಂಧಿ ಅವರ ವಿರುದ್ಧ ಮುಖ್ಯ ನ್ಯಾಯಧೀಶರಾದ ರಂಜನ್ ಗೊಗೊಯ್ ಅವರು ಅತೃಪ್ತಿ ವ್ಯಕ್ತಪಡಿಸಿದ್ದು, ಇದಕ್ಕೆ ಪ್ರತಿಕ್ರಯಿಸಿದ ರಾಹುಲ್ ಗಾಂಧಿ ಅವರು ನಾವು ಮೂರು ತಪ್ಪುಗಳನ್ನು ಮಾಡಿದ್ದೇವೆ. ನಮ್ಮ ತಪ್ಪನ್ನು ನಾವು ಒಪ್ಪಿಕೊಂಡು ಅಫಿಡವಿಟ್‍ನಲ್ಲಿ ಇರುವ ತಪ್ಪನ್ನು ಸರಿಪಡಿಸುತ್ತೇವೆ ಎಂದು ನ್ಯಾಯಾಲಯಕ್ಕೆ ಕ್ಷಮೆಯಾಚಿಸಿದ್ದಾರೆ.










