ಮಂಡ್ಯ ಜನತೆಯ ಉದ್ದೇಶವನ್ನು ಕೇಳಿ ಮುನ್ನಡೆಯುತ್ತೇನೆ : ಸುಮಲತಾ ಅಂಬರೀಶ್…

176
firstsuddi

ಬೆಂಗಳೂರು : ಅಂಬರೀಶ್ ಅವರ ಹುಟ್ಟುಹಬ್ಬದ ಅಂಗವಾಗಿ ಸುಮಲತಾ ಅಂಬರೀಶ್ ಹಾಗೂ ಅಭಿಷೇಕ್ ಅವರು ಅಂಬರೀಶ್‍ರವರ ಸಮಾಧಿಗೆ ಪೂಜೆ ಸಲ್ಲಿಸಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸುಮಲತಾ ಅಂಬರೀಶ್ ಅವರು ನಾನು ಇನ್ನೂ ಸಂಸದೆಯಾಗಿ ಪ್ರಮಾಣವಚನ ಸ್ವೀಕರಿಸಿಲ್ಲ. ಈಗಾಗಲೇ ಸಾಕಷ್ಟು ಆರೋಪವನ್ನು ಮಾಡುತ್ತಿದ್ದಾರೆ. ಕಾವೇರಿ ನೀರಿಗೆ ಸಂಬಂಧಿಸಿದಂತೆ ಮಾತನಾಡಿದ ಅವರು ಕಾವೇರಿ ವಿಚಾರವಾಗಿ ನಾನು ಗಣ್ಯರನ್ನು ಭೇಟಿಯಾಗಿದ್ದೇನೆ. ಈ ಬಗ್ಗೆ ರಾಜಾಕೀಯ ಮಾಡುವುದು ಬೇಡ ಎಲ್ಲರೂ ಒಟ್ಟಾಗಿ ಕಾವೇರಿ ಸಮಸ್ಯೆಯನ್ನು ಬಗೆಹರಿಸೋಣ ಎಂದು ಹೇಳಿದ್ದು, ಬಿಜೆಪಿ ಪಕ್ಷಕ್ಕೆ ಸೇರುತ್ತೀರ ಎಂದು ಕೇಳಿದ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಯಿಸಿದ ಅವರು ಮಂಡ್ಯದ ಜನತೆ ಏನೂ ಹೇಳುತ್ತಾರೋ ಅದನ್ನೇ ನಾನು ಮಾಡುವುದು. ನಾನು ಮೊದಲಿನಿಂದಲೂ ಜನರ ಉದ್ದೇಶವನ್ನು ಕೇಳಿಕೊಂಡು ಮುಂದುವರೆದಿದ್ದೇನೆ. ಮುಂದೆಯೂ ಜನರ ಉದ್ದೇಶವನ್ನು ಕೇಳಿಕೊಂಡೇ ಮುನ್ನಡೆಯುತ್ತೇನೆ ಎಂದು ಹೇಳಿದ್ದಾರೆ.