ಸಾಕು ತಾಯಿಯನ್ನು ಕಳೆದುಕೊಂಡ ನಟ ಜಗ್ಗೇಶ್…

274
firstsuddi

ಬೆಂಗಳೂರು : ನಟ ಜಗ್ಗೇಶ್ ಅವರ ಸಾಕುತಾಯಿ ಮೋರುಬಾಯ್ ಅವರು ನಿನ್ನೆ ನಿಧನರಾಗಿದ್ದು, ಜಗ್ಗೇಶ್ ಅವರು ಸಾಮಾಜಿಕ ಜಾಲಾತಾಣದ ಮೂಲಕ ತಮ್ಮ ನೋವನ್ನು ಹಂಚಿಕೊಂಡಿದ್ದಾರೆ. .“ನನ್ನ ಸಾಕು ತಾಯಿ ಮೋರುಬಾಯ್ ಜನ್ಮ ಕೊಟ್ಟ ನನ್ನ ತಾಯಿ ಬಳಿ ಸಂಗಾತಿಯಾಗಲು ಹೋಗಿಬಿಟ್ಟಳು. ಕಳೆದ ವಾರ ಹರಸಿ ಕಳಿಸಿದಳು. ಇಂದು ಹರಸಲಾಗದ ಕಣ್ಣಿಗೆ ಕಾಣದ ದೂರದ ಊರಿಗೆ ಹೋಗಿಬಿಟ್ಟಳು. ಇಷ್ಟೆ ಅಲ್ಲವೆ ಮನುಜನ್ಮ. ಅವಳ ಕೈ ತುತ್ತು ತಿಂದ ನಾನು ಅವಳ ಮರೆಯಲು ಸಾಧ್ಯವೇ? ನನಗೆ ಮಮತೆ ತೋರಿ ತುತ್ತು ತಿನ್ನಿಸಿದ ಕಡೆ ತಾಯಿ ಪ್ರೀತಿಯ ಕೊಂಡಿಯೂ ಹೋಯಿತು. ಅಮ್ಮನಂತೆ ಇವಳು, ಇನ್ನುಮುಂದೆ ನೆನಪು ಮಾತ್ರ. ಅಲ್ಲಿದೆ ನಮ್ಮ ಮನೆ ಇಲ್ಲಿ ಬಂದೆವು ಸುಮ್ಮನೆ”..ಓಂ ಶಾಂತಿ…” ಎಂದು ಬರೆದು ಭಾವುಕರಾಗಿದ್ದಾರೆ. ತಮ್ಮ ಸಾಕು ತಾಯಿಯನ್ನು ನೆನೆದು ಇನ್ನೊಂದು ಪೋಸ್ಟನ್ನು ಹಂಚಿಕೊಂಡಿದ್ದು  ”ನನ್ನ ಸಾಕು ತಾಯಿ ಮೌರುಬಾಯ್, ಅಮ್ಮನ ಗೆಳತಿ ಹಾಗು ಆಕೆಗೆ ಆಧ್ಯಾತ್ಮಿಕ ದಾರಿ ತೋರಿದವರು. ಅಪ್ಪ ಇಂದಿನ ಮಂತ್ರಿಮಾಲ್ ಜಾಗದಲ್ಲಿದ್ದ ರಾಜಾಮಿಲ್ ನಲ್ಲಿ ಬಂಡಲಿಂಗ್ ಸೆಕ್ಷನ್ ನಲ್ಲಿ ಕಾರ್ಯ ಮಾಡುತ್ತಾ ಶ್ರೀರಾಮಪುರದ 2ನೆ ಕ್ರಾಸ್ ನಲ್ಲಿ ರೇಷನ್ ಡಿಪೊ ನಡೆಸುತ್ತಿದ್ದರು ಅದರ ಜವಾಬ್ದಾರಿ ಅಮ್ಮನದಾಗಿತ್ತು..ಆಗ ಅಪ್ಪ ಅಮ್ಮನಿಗೆ 4 ಮಕ್ಕಳು..ಇನ್ನು ಕೋಮಲ್ ಹುಟ್ಟಿರಲಿಲ್ಲಾ..ಆಗ ಅಮ್ಮನಿಗೆ ಮಕ್ಕಳು ನೋಡಿಕ್ಕೊಂಡು ಡಿಪೋ ನಡೆಸಲು ಕಷ್ಟ ಅಂತ ಮೌರು ಬಾಯ್ ರವರನ್ನ ನಮ್ಮನ್ನ ನೋಡಿಕ್ಕೊಳ್ಳಲು ನೇಮಿಸಿಕ್ಕೊಂಡರು ಅಪ್ಪ.” ಎಂದು ತಮ್ಮ ನೋವನ್ನು ಹಂಚಿಕೊಂಡಿದ್ದಾರೆ.