ರಾಜೀನಾಮೆ ಕ್ರಮಬದ್ಧವಾಗಿಲ್ಲವೆಂದರೆ ಮತ್ತೊಮ್ಮೆ ಸಲ್ಲಿಸಬೇಕು : ವಿ.ಆರ್. ವಾಲಾ…

246
firstsuddi

ಬೆಂಗಳೂರು : ಬಿಜೆಪಿ ನಿಯೋಗ ರಾಜ್ಯಪಾಲರನ್ನು ಭೇಟಿ ಮಾಡಿ ಅತೃಪ್ತ ಶಾಸಕರ ರಾಜೀನಾಮೆಯನ್ನು ಅಂಗೀಕರಿಸಲು ಸ್ಪೀಕರ್ ರಮೇಶ್ ಕುಮಾರ್ ಅವರ ಬಳಿ ಹೇಳುವಂತೆ ರಾಜ್ಯಪಾಲ ವಿ.ಆರ್. ವಾಲಾ ಅವರಿಗೆ ಮನವಿ ಮಾಡಿದ್ದು, ಬಿಜೆಪಿ ನಿಯೋಗದ ಭೇಟಿ ಬಳಿಕ ಶಾಸಕರ ರಾಜೀನಾಮೆ ವಿಷಯಕ್ಕೆ ಸಂಬಂಧಿಸದಂತೆ ರಾಜ್ಯಪಾಲ ವಿ.ಆರ್. ವಾಲಾ ಅವರು ಸ್ಪಷ್ಟನೆ ನೀಡಿದ್ದಾರೆ. ಶಾಸಕರು ಸಲ್ಲಿಸಿರುವ ರಾಜೀನಾಮೆ ಕ್ರಮಬದ್ಧವಾಗಿಲ್ಲ ಎಂದಾದರೆ ಮತ್ತೊಮ್ಮೆ ಸಲ್ಲಿಸಬೇಕು. ಶಾಸಕರು ಸಂವಿಧಾನದನ್ವಯ ಹಾಗೂ ರೂಲ್ ಬುಕ್‍ನಲ್ಲಿರುವ ನಿಯಮದ ಪ್ರಕಾರವೇ ರಾಜೀನಾಮೆ ಸಲ್ಲಿಸಬೇಕು. ಈ ವಿಚಾರದಲ್ಲಿ ನಾನೇನು ಮಾಡಲು ಬರುವುದಿಲ್ಲ ಎಂದು ಹೇಳಿದ್ದಾರೆ.