ಕೇತುಗ್ರಸ್ತ ಚಂದ್ರಗ್ರಹಣ ಹಿನ್ನೆಲೆ ದಕ್ಷಿಣ ಕನ್ನಡ ಜಿಲ್ಲೆಯ ದೇವಸ್ಥಾನದ ಪೂಜಾ ಸಮಯ ಬದಲಾವಣೆ…

319
firstsuddi

ಮಂಗಳೂರು : ಕೇತುಗ್ರಸ್ತ ಚಂದ್ರಗ್ರಹಣ ಹಿನ್ನೆಲೆ ದಕ್ಷಿಣ ಕನ್ನಡ ಜಿಲ್ಲೆಯ ದೇವಸ್ಥಾನದ ಪೂಜಾ ಸಮಯ ಬದಲಾವಣೆ ಮಾಡಲಾಗಿದ್ದು, ಕುಕ್ಕೆ ಸುಬ್ರಹ್ಮಣ್ಯ ದೇವಾಲಯದಲ್ಲಿ ಪ್ರತಿದಿನ ರಾತ್ರಿ 7ಕ್ಕೆ ನಡೆಯುತ್ತಿದ್ದ ಮಹಾ ಪೂಜೆ ಇಂದು 6:30ಕ್ಕೆ ನಡೆಯಲಿದ್ದು, ಸಂಜೆಯ ಆಶ್ಲೇಶ ಬಲಿ ಸೇವೆ ಹಾಗೂ ರಾತ್ರಿಯ ಭೋಜನ ವ್ಯವಸ್ಥೆ ಇರುವುದಿಲ್ಲ. ಸಂಜೆ 7ಗಂಟೆ ನಂತರ ಭಕ್ತಾಧಿಗಳಿಗೆ ದೇವಸ್ಥಾನ ಪ್ರವೇಶ ಇರುವುದಿಲ್ಲ. ಕಟೀಲು ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನದಲ್ಲಿ ರಾತ್ರಿ ನಡೆಯುತ್ತಿದ್ದ ಹೂವಿನ ಪೂಜೆ, ರಂಗಾ ಪೂಜೆ ಇತ್ಯಾದಿ ಯಾವುದೇ ವಿಶೇಷ ಸೇವೆಗಳು ಹಾಗೂ ರಾತ್ರಿ ಅನ್ನದಾನ ಇರುವುದಿಲ್ಲ. ಮಹಾಪೂಜೆ ರಾತ್ರಿ 8 ಗಂಟೆಗೆ ಎಂದಿನಂತೆ ನಡೆಯಲಿದೆ. ಶ್ರೀ ಕ್ಷೇತ್ರ ಧರ್ಮಸ್ಥಳ ಪೂಜಾವಧಿಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಎಂದಿನಂತೆ ಪೂಜೆ , ದೇವರ ದರ್ಶನ ಹಾಗೂ 9ಗಂಟೆವರೆಗೂ ಅನ್ನದಾಸೋಹ ಇರುತ್ತದೆ.

ಕೇತುಗ್ರಸ್ತ ಚಂದ್ರಗ್ರಹಣದ ಸಮಯ

ಸ್ಪರ್ಷ ಆರಂಭ 17-07-2019 ರಾತ್ರಿ 1:32
ಮಧ್ಯ 17-07-2019 ರಾತ್ರಿ 3:01
ಮೋಕ್ಷ 17-07-2019 ಮುಂಜಾನೆ 4:30