ಮೂಡಿಗೆರೆ : ಕಾಫಿ ಡೇ ಮಾಲೀಕ ಸಿದ್ದಾರ್ಥ್ ಅವರು ಸೋಮವಾರ ರಾತ್ರಿ ಮಂಗಳೂರು ತೊಕ್ಕೊಟ್ಟು ನೇತ್ರಾವತಿ ನದಿ ಸಮೀಪ ಕಾಣೆಯಾಗಿದ್ದು, ಇಂದು ಬೆಳಿಗ್ಗೆ ಅವರ ಮೃತದೇಹ ಹೊಯ್ಗೆ ಬಝಾರ್ ಅಳಿವೆ ಬಾಗಿಲ ಬಳಿ ಪತ್ತೆಯಾಗಿದ್ದು, ಸಿದ್ದಾರ್ಥ್ ಅವರ ಸಾವಿನ ಹಿನ್ನೆಲೆ, ಇಂದು ಮಧ್ಯಾಹ್ನ 12ಗಂಟೆಯಿಂದ ಮೂಡಿಗೆರೆ ಬಂದ್ ಮಾಡಲು ಕಾಫಿ ಬೆಳೆಗಾರರ ಸಂಘ ಹಾಗೂ ವಿವಿಧ ಸಂಘಟನೆಗಳು ಕರೆ ನೀಡಿದೆ.










