ಕಳಸ : ಮಾಧ್ಯಮ ಸಮಾಜ ಮತ್ತು ವ್ಯಕ್ತಿಗೂ ಇರುವ ಅವಿನಾಭವ ಸಂಬಂಧವಾಗಿದೆ : ಡಾ|ಜಿ.ಭೀಮೆಶ್ವರ ಜೋಷಿ.

333
firstsuddi

ಕಳಸ : ಮಾಧ್ಯಮ ಯಾವತ್ತೂ ಪರಿಶುದ್ಧವಾಗಿರಬೇಕು.ಅದು ಕಲುಷಿತಗೊಂಡರೆ ಅದರ ಅಸ್ತಿತ್ವವನ್ನು ಕಳೆದುಕೊಳ್ಳುತ್ತದೆ ಎಂದು ಹೊರನಾಡು ಅನ್ನಪೂರ್ಣೇಶ್ವರಿ ದೇವಸ್ಥಾನದ ಧರ್ಮಕರ್ತ ಡಾ|ಜಿ.ಭೀಮೆಶ್ವರ ಜೋಷಿ ಹೇಳಿದರು.
ಮಾದ್ಯಮ ಸಂಸ್ಕೃತಿ ಪ್ರತಿಷ್ಠಾನ ಚಿಕ್ಕಮಗಳೂರು ಮತ್ತು ಕಳಸ ಪ್ರಥಮ ಧರ್ಜೆ ಕಾಲೇಜಿನ ಪತ್ರಿಕೋಧ್ಯಮ ವಿದ್ಯಾರ್ಥಿಗಳ ಸಂಯುಕ್ತಾಶ್ರಯದಲ್ಲಿ ನಡೆದ ಪತ್ರಿಕಾ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದ ಅವರು ತಿಳಿಯಾದ ನೀರಿನಲ್ಲಿ ಮಾತ್ರ ನದಿಯ ಒಳಗಡೆ ಏನಿದೆ ಅನ್ನುವುದನ್ನು ತಿಳಿದುಕೊಳ್ಳಬಹುದು. ಆದರೆ ನೀರು ಕಳುಷಿತಗೊಂಡರೆ ಅದರ ಅಸ್ತಿತ್ವ ಕಳೆದುಕೊಳ್ಳುತ್ತದೆ. ನೈಜ್ಯ ಮತ್ತು ಸ್ಪಷ್ಟವಾದ ಜನಮಾನಸಕ್ಕೆ ಪ್ರಯೋಜನ ಆಗುವಂತಹ ವಿಚಾರಗಳಿಗೆ ಹೆಚ್ಚು ವಿಚಾರಗಳಿಗೆ ಮಾಧ್ಯಮ ಆಧ್ಯತೆಯನ್ನು ಕೋಡಬೇಕಾಗುತ್ತದೆ. ಮಾಧ್ಯಮ ಸಮಾಜ ಮತ್ತು ವ್ಯಕ್ತಿಗೂ ಇರುವ ಅವಿನಾಭವ ಸಂಬಂದವಾಗಿದೆ. ಪ್ರಪಂಚದ ಉದ್ದಗಳಕ್ಕೂ ಯಾವುದೇ ಮೂಲೆಯಲ್ಲಿ ನಡೆದ ಸತ್ಯ ಘಟನೆಗಳನ್ನು ಮಾದ್ಯಮ ಪ್ರಚಾರ ಪಡಿಸುತ್ತದೆ. ಮಾಧ್ಯಮ ಈ ಸಮಾಜದ ಉಸಿರಾಗಿದೆ ಎಂದು ಹೇಳಿದರು.
ಪರಿಸರವಾದಿ ಗಜೇಂದ್ರ ಗೊರಸುಗುಡಿಗೆ ಮಾತನಾಡಿ ದೇಶದ ಹಾಗು-ಹೋಗುಗಳ ಬಗ್ಗೆ ಅತ್ಯಂತ ಜವಾಬ್ದಾರಿಯುತವಾಗಿ ಸಮಾಜಕ್ಕೆ ಮುಟ್ಟಿಸುವುದು ಮಾಧ್ಯಮ ಕ್ಷೇತ್ರ. ಸಮಾಜದ ಪಿಡುಗು, ಭ್ರಷ್ಟಾಚಾರವನ್ನು ನಿವಾರಿಸಲು ಮಾಧ್ಯಮದ ಕೊಡುಗೆ ಹೆಚ್ಚಿದೆ. ಇತ್ತೀಚಿಗೆ ಮೊಬೈಲ್ ತಂತ್ರಜ್ಞಾನದಿಂದ ಮಾದ್ಯಮ ಕ್ಷೇತ್ರ ಸಾಕಷ್ಟು ಮುಂದುವರೆದಿದೆ. ಆದರೆ ಇದರ ದುರ್ಬಳಕೆಯು ಹೆಚ್ಚಾಗಿ ಆಗುತ್ತಿದೆ. ಮೊಬೈಲ್‍ನ್ನು ಒಳ್ಳೆಯ ಉದ್ದೇಶಕ್ಕೆ ಬಳಸಿಕೊಂಡಲ್ಲಿ ಅದು ಯಾವತ್ತೂ ಕೆಟ್ಟದ್ದಲ್ಲ. ಮೊಬೈಲ್ ನಿಂದ ಸಾಕಷ್ಟು ಒಳ್ಳೆಯ ವಿಚಾರಗಳನ್ನು, ಜ್ಞಾನ ಸಂಪಾದನೆಯನ್ನು ಕೂಡ ಪಡೆಯಬಹುದು. ಈ ಕಾಲೇಜಿನಲ್ಲಿ ಇಲ್ಲಿಯ ಪತ್ರಿಕೋದ್ಯಮದ ವಿದ್ಯಾರ್ಥಿಗಳೇ ಸ್ವರ್ಣ ಕಲಸ ಎಂಬ ಮಾಸಿಕ ಪತ್ರಿಕೆಯನ್ನು ಹೊರ ತಂದಿರುವುದು ಒಳ್ಳೆಯ ಕಾರ್ಯ. ಇದರಿಂದ ಇಂದಿನ ಯುವ ಬರಹಗಾರರಿಗೆ ಅತ್ಯಂತ ಅನುಕೂಲವಾಗಲಿದೆ ಎಂದು ಹೇಳಿದರು.
ಕಾಲೇಜು ಪ್ರಾಂಶುಪಾಲ ವಿನಯ್ ಕುಮಾರ್ ಶೆಟ್ಟಿ ಮಾತನಾಡಿ ಪತ್ರಿಕಾ ರಂಗಕ್ಕೆ ಕಾಲಿಡುವ ವಿದ್ಯಾರ್ಥಿಗಳು ಇದರಿಂದ ನಾನು ಹಣವನ್ನು ಸಂಪಾದನೆ ಮಾಡುತ್ತೇನೆ ಎನ್ನುವ ಉದ್ದೇಶವನ್ನು ಬಿಟ್ಟು ಸಮಾಜವನ್ನು ತಿದ್ದುತ್ತೇನೆ ಎನ್ನುವ ಉದ್ದೇಶವನ್ನು ಇಟ್ಟುಕೊಂಡು ಕಾಲಿಡಬೇಕು. ಕೇವಲ ಪ್ರತಿಷ್ಟೆ, ಹಣ, ಹೆಸರಿನ ಆಸೆಗೆ ಬೀಳದೆ ಒಳ್ಳೆಯ ಉದ್ದೇಶಕಾಗ್ಕಿ ಈ ರಂಗವನ್ನು ಬಳಕೆ ಮಾಡಿಕೊಳ್ಳಿ. ಪ್ರಮಾಣಿಕತೆ ಮತ್ತು ಬದ್ಧತೆಯಿಂದ ತಮ್ಮ ಸಿದ್ದಾಂತಕ್ಕೆ ಬೇಕಾದ ರೀತಿಯಲ್ಲಿ ಪತ್ರಕರ್ತರಾಗಬೇಕು ಎಂದು ಹೇಳಿದರು.
ಮಾದ್ಯಮ ಸಂಸ್ಕೃತಿ ಪ್ರತಿಷ್ಟಾನದ ಕಾರ್ಯಾಧ್ಯಕ್ಷ ಮಾತನಾಡಿ ಕರ್ನಾಟಕದಲ್ಲಿ ಪತ್ರಿಕೋದ್ಯಮ ತಕ್ಕ ಮಟ್ಟಿಗೆ ತನ್ನ ಅಸ್ತಿತ್ವವನ್ನು ಉಳಿಸಿಕೊಂಡು ವ್ಯಾಪಕವಾಗಿ ಬೆಳೆದಿದೆ. ಸ್ವಾಸ್ತ್ಯ ಸಮಾಜ ನಿರ್ಮಾಣ ಮಾಡಲು ಪತ್ರಿಕೆಗಳ ಕೊಡುಗೆ ಅಪಾರವಾಗಿದೆ. ಈ ನಿಟ್ಟಿನಲ್ಲಿ ಜಿಲ್ಲೆಯಾಧ್ಯಂತ ಪತ್ರಿಕೋದ್ಯಮ ಕಲಿಯುತ್ತಿರುವ ವಿದ್ಯಾರ್ಥಿಗಳಿಗೆ ಹಲವಾರು ಕಾರ್ಯಕ್ರಮ ಹಾಗೂ ತರಭೇತಿಗಳನ್ನು ಹಮ್ಮಿಕೊಂಡಿದೆ ಅದನ್ನು ಸದ್ಭಳಕೆ ಮಾಡಿಕೊಳ್ಳಿ ಎಂದು ಹೇಳಿದರು. ಈ ಸಂದರ್ಭದಲ್ಲಿ ಉಪನ್ಯಾಸಕರಾದ ಸುಮಾ, ಆದಿತ್ಯ ಆಡಿಗ, ಪೂಜಾ, ಮುಖಂಡರಾದ ಸತ್ಯನಾರಾಯಣ, ಪ್ರಶಾಂತ್ ಇದ್ದರು.