ಬೆಂಗಳೂರು : ದಿನನಿತ್ಯ ಕುಡಿದು ಬಂದು ಹಿಂಸಿಸುತ್ತಿದ್ದ ಪತಿಯನ್ನು ಪತ್ನಿಯೇ ಕೊಲೆ ಮಾಡಿ ಮಧ್ಯ ಸೇವಿಸಿ ಮೃತಪಟ್ಟಿದ್ದಾರೆ ಎಂದು ನಂಬಿಸಿ ಅಂತ್ಯಸಂಸ್ಕಾರ ಮಾಡಿರುವ ಘಟನೆ ಆನೆಕಲ್ ತಾಲ್ಲೂಕಿನ ಶಾಂತಿಪುರದಲ್ಲಿ ನಡೆದಿದೆ. ಹತ್ಯೆಯಾದ ದುರ್ಧೈವಿ ಸುಬ್ರಹ್ಮಣ್ಯ(68) ಎನ್ನಲಾಗಿದ್ದು, ಮೃತಪಟ್ಟಿದ್ದ ವ್ಯಕ್ತಿಯ ಮೈಮೇಲೆ ಗಾಯಗಳು ಕಾಣಿಸಿಕೊಂಡಿದ್ದರಿಂದ ಪೊಲೀಸರು ಅನುಮಾನಗೊಂಡು ಮರಣೋತ್ತರ ಪರೀಕ್ಷೆ ನಡೆಸಿ ಮೃತದೇಹವನ್ನು ಕುಟುಂಬಕ್ಕೆ ನೀಡಿದ್ದರು. ಮರಣೋತ್ತರ ಪರೀಕ್ಷೆಯಲ್ಲಿ ಮೃತ ಹಲ್ಲೆಯಿಂದ ಸಾವನ್ನಪ್ಪಿದ್ದಾರೆ ಎಂದು ಎಫ್ಎಸ್ಸಿಎಲ್ ವರದಿ ಬಂದ ಹಿನ್ನೆಲೆ, ಪತ್ನಿ ಮುನಿಯಮ್ಮನನ್ನು ಬಂಧಿಸಿದ್ದು, ಮೃತರ ಪತ್ನಿಯನ್ನು ವಶಕ್ಕೆ ಪಡೆದ ಪೊಲೀಸರು ತನಿಖೆ ವೇಳೆ ತನ್ನ ಗಂಡ ದಿನನಿತ್ಯ ಕುಡಿದು ಬಂದು ಕಿರುಕುಳ ಕೊಡುತ್ತಿದ್ದರಿಂದ ನಾನು ಹತ್ಯೆಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾಳೆ ಎನ್ನಲಾಗಿದೆ.










