ಎರಡನೇ ಬಾರಿಯೂ ಹೆಣ್ಣುಮಗು ಜನಿಸಿದಕ್ಕೆ ಕೋಪಗೊಂಡು ಪತಿಯನ್ನೇ ಕೊಂದ ಪತ್ನಿ…

808
firstsuddi

ಮುಂಬೈ : ಎರಡನೇ ಬಾರಿಯೂ ಹೆಣ್ಣು ಮಗು ಜನಿಸಿದಕ್ಕೆ ಕೋಪಗೊಂಡು ಪತ್ನಿ ತನ್ನ ಪತಿಯನ್ನು ಚಾಕುವಿನಿಂದ 11 ಬಾರಿ ಇರಿದು ಕೊಲೆ ಮಾಡಿ ಬಳಿಕ ಪತಿಯೇ ಚಾಕುವಿನಿಂದ ಚುಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ನಂಬಿಸಿರುವ ಘಟನೆ ಮುಂಬೈನ ನಲಸೋಪರದ ಗಾಲಾ ನಗರದಲ್ಲಿ ನಡೆದಿದೆ. ಸುನಿಲ್(35) ಮೃತ ದುರ್ದೈವಿ ಎನ್ನಲಾಗಿದ್ದು, ಮೃತಪಟ್ಟ ವ್ಯಕ್ತಿಯು ತಾನೇ ತನ್ನ ಕುತ್ತಿಗೆ ಹಾಗೂ ಹೊಟ್ಟೆಗೆ ಚುಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಳ್ಳಲು ಸಾಧ್ಯವಿಲ್ಲ ಎಂದು ಅನುಮಾನಗೊಂಡ ಪೊಲೀಸರು ಪತ್ನಿ ಪ್ರಣಾಲಿಯನ್ನು ತನಿಖೆ ನಡೆಸಿದಾಗ ತಾನೇ ಕೊಲೆ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾರೆ. ಪೊಲೀಸರು ವಿಚಾರಣೆ ನಡೆಸುವಾಗ ಮೊದಲು ನನ್ನ ಪತಿ ಬೇರೊಬ್ಬ ಮಹಿಳೆಯ ಜೊತೆ ಸಂಬಂಧ ಇಟ್ಟುಕೊಂಡಿದ್ದಾರೆ ಅದಕ್ಕಾಗಿ ಕೊಲೆ ಮಾಡಿರುವುದಾಗಿ ತಿಳಿಸಿದ್ದು, ಬಳಿಕ ಮತ್ತೆ ವಿಚಾರಣೆ ನಡೆಸಿದಾಗ ನನಗೆ ಎರಡನೇ ಬಾರಿಯೂ ಹೆಣ್ಣುಮಗು ಜನಿಸಿತು ಇದಕ್ಕೆ ನನ್ನ ಪತಿಯೇ ಕಾರಣ ಎಂದು ಕೊಲೆ ಮಾಡಿದ್ದೇನೆ ಎಂದು ಪತ್ನಿ ಹೇಳಿದ್ದಾರೆ.