ಹುಡುಗಿಯರೊಂದಿಗಿನ ಸೆಕ್ಸ್ ವೀಡಿಯೋ ವೈರಲ್, ಸ್ವಯಂಘೋಷಿತ ದೇವಮಾನವ ಎಸ್ಕೇಪ್…

4094
firstsuddi

ಚಂಡೀಘಡ : ಹುಡುಗಿಯರೊಂದಿಗಿನ ಸೆಕ್ಸ್ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಸ್ವಯಂಘೋಷಿತ ದೇವಮಾನವ ಪರಾರಿಯಾಗಿರುವ ಘಟನೆ ಹರಿಯಾಣದ ಗುರುಗ್ರಾಮದಲ್ಲಿ ನಡೆದಿದೆ. ಆರೋಪಿಯನ್ನು ಜ್ಯೋತಿಗಿರಿ ಎಂದು ಗುರುತಿಸಲಾಗಿದ್ದು, ಇವರು ಹರಿಯಾಣದ ಗುರುಗ್ರಾಮದ ಬಹೇದಾ ಕಲಾಗ್ರಾಮದಲ್ಲಿ ಆಶ್ರಮ ನಡೆಸುತ್ತಿದ್ದ ದೇವಮಾನವ ಜ್ಯೋತಿಗಿರಿ ಅವರು ಅನೇಕ ಅಪ್ರಾಪ್ತ ಬಾಲಕಿಯರನ್ನು ಲೈಂಗಿಕ ಕ್ರಿಯೆಗೆ ಬಳಸಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ. ಜ್ಯೋತಿಗಿರಿ ಹುಡುಗಿಯರ ಜೊತೆಗಿನ ಸೆಕ್ಸ್ ವೀಡಿಯೋ ಈಗಾ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಆರೋಪಿ ತಲೆಮರೆಸಿಕೊಂಡಿದ್ದಾರೆ. ಅಲ್ಲದೇ ವೈರಲ್ ಆಗಿರುವ ವೀಡಿಯೋಗಳ ಸತ್ಯಾಸತ್ಯತೆಯನ್ನು ತಿಳಿಯಲು ಸೈಬರ್ ಸೆಲ್ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಹಾಗೂ ಇಂತಹ ವೀಡಿಯೋಗಳನ್ನು ವೈರಲ್ ಮಾಡುವವರ ವಿರುದ್ಧ ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.