ಮೈಸೂರು : ಇಂದು ಮುಂಜಾನೆ ಹಸುವನ್ನು ಕದ್ದು ಪರಾರಿಯಾಗುತ್ತಿದ್ದ ಕಳ್ಳರನ್ನು ಗ್ರಾಮಸ್ಥರೇ ಹಿಡಿದು ಹಿಗ್ಗಾಮುಗ್ಗಾ ಥಳಿಸಿ ಬಳಿಕ ಪೊಲೀಸರಿಗೆ ಒಪ್ಪಿಸಿರುವ ಘಟನೆ ಕೆ.ಆರ್ ನಗರ ತಾಲ್ಲೂಕಿನ ದಿಟ್ಟಳ್ಳಿ ಗ್ರಾಮದಲ್ಲಿ ನಡೆದಿದೆ. ಬೆಳಗ್ಗಿನ ಜಾವ ಗ್ರಾಮಕ್ಕೆ ಆಗಮಿಸಿದ 4 ಮಂದಿ ಕಳ್ಳರು ಹಸುವನ್ನು ಕದ್ದು, ಗೂಡ್ಸ್ ಗಾಡಿಯಲ್ಲಿ ತುಂಬಿಸಿಕೊಂಡು ಪರಾರಿಯಾಗುತ್ತಿದ್ದರು. ಇದನ್ನು ಗಮನಿಸಿದ ಗ್ರಾಮಸ್ಥರು ಕೂಡಲೇ ಗಾಡಿಯನ್ನು ತಡೆದು ಹಸುಗಳ್ಳರಿಗೆ ಹಿಗ್ಗಾಮುಗ್ಗಾ ಥಳಿಸಿ ಕೆ.ಆರ್. ನಗರ ಪೊಲೀಸರಿಗೆ ಒಪ್ಪಿಸಿದ್ದಾರೆ. ಕಳ್ಳರನ್ನು ಬೀರೇಶ್, ರಾಮಚಂದ್ರ, ದೇವರಾಜ ನಾಯಕ ಹಾಗೂ ಚಂದ್ರನಾಯಕ ಎಂದು ಗುರುತಿಸಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.










