ನಾನು ರೇಪ್ ಮಾಡಿಲ್ಲ, ಹಣವನ್ನು ಕದ್ದಿಲ್ಲ : ಡಿ.ಕೆ. ಶಿವಕುಮಾರ್.

232
firstsuddi

ಬೆಂಗಳೂರು : ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಕೆ. ಶಿವಕುಮಾರ್ ಅವರು, ಹೈಕೋರ್ಟ್ ಆದೇಶದ ಬಗ್ಗೆ ಪ್ರತಿಕ್ರಯಿಸಿದ್ದು, ಗುರುವಾರ ರಾತ್ರಿ ಕೋರ್ಟ್ ಸಮ್ಮನ್ಸ್ ಜಾರಿ ಮಾಡಿದೆ. ಸುಮ್ಮನೆ ನೀವು ಟೆನ್ಶನ್ ಮಾಡಿಕೊಳ್ಳಬೇಡಿ. ನಾನು ಸಹ ಟೆನ್ಶನ್ ಮಾಡಿಕೊಳ್ಳುವುದಿಲ್ಲ. ನಾನೇನು ತಪ್ಪು ಮಾಡಿಲ್ಲ. ನಾನು ರೇಪ್ ಮಾಡಿಲ್ಲ, ಹಣವನ್ನು ಕದ್ದಿಲ್ಲ. ಅಂದು ಪಕ್ಷದ ಸೂಚನೆ ಮೇರೆಗೆ ಶಾಸಕರನ್ನು ರಕ್ಷಣೆ ಮಾಡಿದ್ದೆವು. ಅದಕ್ಕಾಗಿ ಇಲ್ಲಿಯವರೆಗೂ ಎಲ್ಲಾ ಕಿರುಕುಳ ಅನುಭವಿಸಿದ್ದೇನೆ. ಕಾನೂನಿಗೆ ಬೆಲೆ ಕೊಟ್ಟು ನಾನು ವಿಚಾರಣೆ ಎದುರಿಸುತ್ತೇನೆ. ಯಾರಿಗಾದರೂ ಒಳ್ಳೆಯದು ಮಾಡಬೇಕು ಎಂದು ಹೊರಟಾಗ ಈ ರೀತಿ ಎಲ್ಲಾ ಆಗುವುದು ಸಹಜ ಎಂದರು.