ಮೂಡಿಗೆರೆ : ವರ್ಷಾಂತ್ಯಕ್ಕೆ 39.08 ಲಕ್ಷ ಲಾಭ ಗಳಿಸಿದ ಬಿ. ಹೊಸಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ…

317
firstsuddi

ಮೂಡಿಗೆರೆ : ಬಿ. ಹೊಸಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ 2018-19ನೇ ಸಾಲಿನ ಸರ್ವೆ ಸದಸ್ಯರ ವಾರ್ಷಿಕ ಮಹಾಸಭೆ ಒ.ಜಿ ರವಿ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಸಂಘದ 2018-19ನೇ ಸಾಲಿನ ವಾರ್ಷಿಕ ಒಟ್ಟು ವ್ಯವಹಾರ 84.81 ಕೋಟಿ ರೂ.ಗಳಾಗಿದ್ದು, ಸಹಕಾರ ಸಂಘವು ವರ್ಷಾಂತ್ಯಕ್ಕೆ 39.08 ಲಕ್ಷ ಲಾಭ ಗಳಿಸಿದ್ದು, ಸಂಘವು ಸದಸ್ಯರಿಗೆ ಶೇಕಡಾ 11ರಷ್ಟು ಷೇರ್ ಡಿವಿಡೆಂಟ್ ನೀಡಲಾಗುವುದು ಎಂದು ಸಭೆಯಲ್ಲಿ ತೀರ್ಮಾನಿಸಲಾಯಿತು. ಇದರಲ್ಲಿ 1% ನೆರೆ ಸಂತ್ರಸ್ಥರಿಗೆ ನೀಡಲು ಸರ್ವ ಸದಸ್ಯರ ಒಪ್ಪಿಗೆಯಂತೆ ತೀರ್ಮಾನಿಸಲಾಗಿದ್ದು, ಸದಸ್ಯರಿಗೆ ಶೇಕಡಾ 10% ಅಷ್ಟು ಷೇರ್ ಡಿವಿಡೆಂಟ್ ನೀಡಲಾಗುವುದು ಎಂದು ಸಭೆಯಲ್ಲಿ ಉಪಾಧ್ಯಕ್ಷರಾದ ಬಿ.ಎಸ್. ರಕ್ಷಿತ್ ತಿಳಿಸಿದರು. ಸಭೆಯಲ್ಲಿ ಸಂಘದ ಸದಸ್ಯರು, ನಿರ್ದೇಶಕರು ಹಾಗೂ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗಳು, ಸಿಬ್ಬಂದಿಗಳು ಹಾಗೂ ಡಿಸಿಸಿ ಬ್ಯಾಕ್ ಮೇಲ್ವಿಚಾರಕರು ಹಾಜರಿದ್ದರು.