ಬೆಂಗಳೂರು : ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಸರ್ಕಾರದಿಂದ ನೆರೆ ಪೀಡಿತ ಪ್ರದೇಶಗಳಿಗೆ ಯಾವುದೇ ಪರಿಹಾರ ಬಿಡಿಗಡೆಯಾಗದ ಹಿನ್ನೆಲೆ, ಕಾಂಗ್ರೆಸ್ ಕರ್ನಾಟಕ ಟ್ವಿಟರ್ ಮೂಲಕ ಬಿಜೆಪಿ ಸರ್ಕಾರಕ್ಕೆ ಕೆಲವೊಂದು ಪ್ರಶ್ನೆಗಳನ್ನು ಕೇಳಿದ್ದು, “ಮಾನ್ಯ ನರೇಂದ್ರ ಮೋದಿ ಹಾಗೂ ಬಿ.ಎಸ್. ಯಡಿಯೂರಪ್ಪ ಅವರ ಬಿಜೆಪಿ ಸರ್ಕಾರಗಳಿಗೆ 10 ಪ್ರಶ್ನೆಗಳು.”
1) ಪ್ರಧಾನಿ ನರೇಂದ್ರ ಮೋದಿ ಅವರು ಪ್ರವಾಹ ಪರಿಸ್ಥಿತಿ ವೀಕ್ಷಣೆಗೆ ಯಾಕೆ ಬಂದಿಲ್ಲ?
2) ಗೃಹ ಸಚಿವ ಅಮಿತ್ ಶಾ, ವಿತ್ತ ಸಚಿವೆ ನಿರ್ಮಲಾ ಸೀತರಾಮನ್ ಹಾಗೂ ಕೇಂದ್ರ ತಂಡದ ಪ್ರವಾಹ ವೀಕ್ಷಣೆಯ ಫಲ ಏನು?
3) ಈ ಭೀಕರ ಪ್ರವಾಹ ವಿಕೋಪವನ್ನು “ರಾಷ್ಟ್ರೀಯ ವಿಪತ್ತು” ಎಂದು ಯಾಕೆ ಘೋಷಿಸಲಿಲ್ಲ?
4) ಇಷ್ಟು ದೊಡ್ಡ ಮಟ್ಟದ ನಷ್ಟ ಸಂಭವಿಸಿದರೂ ಯಡಿಯೂರಪ್ಪನವರ ಬೇಡಿಕೆಯಂತೆ ಕೇಂದ್ರವು ₹5,000 ಕೋಟಿ ಮಧ್ಯಂತರ ಪರಿಹಾರ ಬಿಡುಗಡೆ ಯಾಕೆ ಮಾಡಲಿಲ್ಲ?
5) ಪ್ರಧಾನಿಯವರು ಪ್ರವಾಹ ಪರಿಸ್ಥಿತಿ ಬಗ್ಗೆ ಚರ್ಚಿಸಲು ರಾಜ್ಯ ಸರ್ಕಾರಕ್ಕೆ ಅವಕಾಶ ನೀಡದೆ ಕರ್ನಾಟಕವನ್ನು ಅವಮಾನಿಸುತ್ತಿರುವುದೇಕೆ?
6) ತಕ್ಷಣ ಪರಿಹಾರ ಬಿಡುಗಡೆಗಾಗಿ ಕೇಂದ್ರದ ಮೇಲೆ ರಾಜ್ಯ ಸರ್ಕಾರ ಒತ್ತಡ ಹೇರುತ್ತಿಲ್ಲ ಏಕೆ?
7) ರಾಜ್ಯ ಸರ್ಕಾರವು ಪ್ರಧಾನಿ ಬಳಿ ಪರಿಹಾರ ಕೇಳಲು ಸರ್ವಪಕ್ಷಗಳ ನಾಯಕರು, ಕೆಲ ಸಂತ್ರಸ್ತರು, ರೈತ ಮುಖಂಡರ ನಿಯೋಗವನ್ನು ಯಾಕೆ ಕರೆದೊಯ್ಯುತ್ತಿಲ್ಲ?
8) 25 ಮಂದಿ ಬಿಜೆಪಿ ಸಂಸದರು ತಮ್ಮ ಕರ್ತವ್ಯ ಮರೆತು ಕಣ್ಮರೆಯಾಗಿರುವುದೇಕೆ?
9) ಸಂತ್ರಸ್ತರು ಪ್ರತಿಭಟಿಸುವರೆಂದು ಹೆದರಿ ಬೆಳಗಾವಿಯಲ್ಲಿ ಅಧಿವೇಶನ ಮಾಡದಿರುವುದು ಪಲಾಯನವಲ್ಲವೇ?
10) ನಷ್ಟ ₹35,160ಕೋಟಿ ಎಂದು ಅಂದಾಜಿಸಿ ರಾಜ್ಯವು ₹1500ಕೋಟಿ ಬಿಡುಗಡೆ ಮಾಡಿರುವುದು ಸಂತ್ರಸ್ತರಿಗೆ ಮಾಡಿರುವ ಅನ್ಯಾಯವಲ್ಲವೆ? ಎಂದು ಟ್ವೀಟ್ ಮಾಡಿದೆ.










