ಚಿಕ್ಕಮಗಳೂರು:ಭಾರಿ ಮಳೆಗೆ ಮನೆಯೊಳಗೆ ನೀರು ನುಗ್ಗಿ ಪೀಠೋಪಕರಣಗಳು ಜಲಾವೃತ.

458

ಚಿಕ್ಕಮಗಳೂರು : ನಗರದಲ್ಲಿ ಸುರಿದ ಭಾರಿ ಮಳೆಗೆ ಮನೆಯೊಳಗೆ ನೀರು ನುಗ್ಗಿ ಪೀಠೋಪಕರಣಗಳು ಜಲಾವೃತವಾಗಿರುವ ಘಟನೆ  ಅಯ್ಯಪ್ಪ ನಗರ,ವಿಜಯನಗರ,ಟಿಪ್ಪು ನಗರ ,ಬಡಾವಣೆಯಲ್ಲಿ ನಡೆದಿದೆ. ಮನೆಯ ಮುಂಭಾಗದಲ್ಲಿ ನಿಲ್ಲಿಸಿದ್ದ ಬೈಕ್ ಕಾರು ನೀರಿನಲ್ಲಿ ಮುಳುಗಡೆಯಾಗಿದ್ದು ಬೆಲೆಬಾಳುವ ಲಕ್ಷಾಂತರ ರೂಪಾಯಿ ವಸ್ತುಗಳು ಜಲಾವೃತಗೊಂಡಿದ್ದು.ಮನೆಯಿಂದ ನೀರನ್ನು ಹೊರಹಾಕಲು ಸ್ಥಳೀಯರು ಪರದಾಡುತ್ತಿದ್ದು ನಗರ ಸಭೆಗೆ ಕರೆ ಮಾಡಿದ್ದರೂ ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಎಂದು ಬಡಾವಣೆ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ