ಚಿಕ್ಕಮಗಳೂರು : ಸರ್ಕಾರಿ ಬಸ್ ಪಲ್ಟಿ, 2 ವರ್ಷದ ಮಗು ಸಾವು…

211
firstsuddi

ಚಿಕ್ಕಮಗಳೂರು : ಸರ್ಕಾರಿ ಬಸ್ ಪಲ್ಟಿಯಾಗಿ 2 ವರ್ಷದ ಮಗು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಜಿಲ್ಲೆಯ ತರೀಕೆರೆ ತಾಲ್ಲೂಕಿನ ಕಾಟಿಗನಗೆರೆ ಬಳಿ ನಡೆದಿದೆ. ಸುಹಾಸ್(2) ಮೃತ ಮಗು ಎಂದು ಗುರುತಿಸಲಾಗಿದು, ಚಾಲಕನ ಅಜಾಗರೂಕತೆಯೇ ಈ ಘಟನೆಗೆ ಕಾರಣ ಎನ್ನಲಾಗಿದೆ. ಧರ್ಮಸ್ಥಳದಿಂದ ಚಿತ್ರದುರ್ಗದ ಕಡೆಗೆ ತೆರಳುತ್ತಿದ್ದ ಬಸ್ ಇದಾಗಿದ್ದು, ನಿನ್ನೆ ತಡರಾತ್ರಿ ಬಸ್ ಚಾಲಕ ನಿದ್ದೆಗೆ ಜಾರಿದ ಹಿನ್ನೆಲೆ, ನಿರ್ವಾಹಕ ಬಸ್ ಚಾಲನೆ ಮಾಡಿದ್ದು, ಈ ವೇಳೆ ಚಾಲಕನ ನಿಯಂತ್ರಣ ತಪ್ಪಿ ಬಸ್ ಪಲ್ಟಿಯಾದ ಪರಿಣಾಮ 2ವರ್ಷದ ಮಗು ಸ್ಥಳದಲ್ಲೇ ಮೃತಪಟ್ಟಿದ್ದು, ಹಲವು ಪ್ರಯಾಣಿಕರಿಗೆ ಗಂಭೀರ ಗಾಯವಾಗಿದೆ. ಗಾಯಾಳುಗಳನ್ನು ತರೀಕೆರೆ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದ್ದು, ಈ ಕುರಿತು ಅಜ್ಜಂಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.