ಬೆಳಗಾವಿ : ನಾನು ಕಮಲ ಪಕ್ಷದ ಸಾಹುಕಾರ್.ಆದರೆ ಕಾಂಗ್ರೆಸ್ ಪಕ್ಷದಲ್ಲಿ ಒಬ್ಬ ಸಾಹುಕಾರ್ ಇದ್ದಾನೆ ಹುಷಾರ್ ಎಂದು ಅನರ್ಹ ಶಾಸಕ ರಮೇಶ್ ಜಾರಕಿಹೊಳಿ ಅವರು ಸಹೋದರ ಲಖನ್ ಜಾರಕಿಹೊಳಿ ಅವರ ವಿರುದ್ಧ ವ್ಯಂಗ್ಯವಾಡಿದರು. ಗೋಕಾಕ್ನ ಖನಗಾಂವ ಗ್ರಾಮದಲ್ಲಿ ಚುನಾವಣಾ ಪ್ರಚಾರದ ವೇಳೆ ಮಾತನಾಡಿದ ಅವರು, ನಾನು ಐದು ಬಾರಿ ಕಾಂಗ್ರೆಸ್ ಪಕ್ಷದಿಂದ ಚುನಾವಣೆಗೆ ಸ್ಪರ್ಧಿಸಿ ಗೆದ್ದಿದ್ದೇನೆ. ಆದರೆ ಈ ಬಾರಿ ನಾನು ಬಿಜೆಪಿ ಪಕ್ಷದ ಸಾಹುಕಾರ್. ಆದರೆ ಕಾಂಗ್ರೆಸ್ ಒಬ್ಬ ಸಾಹುಕಾರ್ ಇದ್ದಾನೆ ಹುಷಾರ್ ಎಂದು ಲಖನ್ ಜಾರಕಿಹೊಳಿ ಅವರ ವಿರುದ್ಧ ವ್ಯಂಗ್ಯವಾಡಿದರು. ಅನರ್ಹ ಶಾಸಕರಿಗೆ ನೈತಿಕತೆ ಇಲ್ಲ ಎಂದು ನನ್ನ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ. ಈ ಬಾರಿ ಬಿಜೆಪಿಗೆ ಮತ ಹಾಕುವ ಮೂಲಕ ಬಹುಮತದಿಂದ ನನ್ನನ್ನು ಗೆಲ್ಲಿಸಿ ಎಂದು ಕ್ಷೇತ್ರದ ಜನರಲ್ಲಿ ಮನವಿ ಮಾಡಿಕೊಂಡಿದ್ದಾರೆ.










