ಚಿಕ್ಕಮಗಳೂರು : ಸ್ವಚ್ಚ ಭಾರತ ಅಭಿಯಾನದ ಅಂಗವಾಗಿ ಭಾರತೀಯ ಅಂಚೆ ಇಲಾಖೆಯ ವತಿಯಿಂದ ಜಾಗೃತಿ ಜಾಥಾ…

404
firstsuddi

ಚಿಕ್ಕಮಗಳೂರು : ಸ್ವಚ್ಚ ಭಾರತ ಅಭಿಯಾನದ ಅಂಗವಾಗಿ ಭಾರತೀಯ ಅಂಚೆ ಇಲಾಖೆಯ ಅಧಿಕಾರಿಗಳು, ನೌಕರರು ಮತ್ತು ಸಿಬ್ಬಂಧಿಗಳು ನಗರದಲ್ಲಿ ಇಂದು ಜಾಗೃತಿ ಜಾಥಾ ನಡೆಸಿದರು.
ಭಿತ್ತಿ ಪತ್ರಗಳೊಂದಿಗೆ ತಾಲ್ಲೂಕು ಕಛೇರಿ ಮುಂಭಾಗದಿಂದ ಮೆರವಣಿಗೆಯಲ್ಲಿ ಹೊರಟ ಅಧಿಕಾರಿಗಳು, ನೌಕರರು ಮತ್ತು ಸಿಬ್ಬಂಧಿಗಳು ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಸ್ವಚ್ಚತೆಯ ಮಹತ್ವ ಸಾರಿದರು.
ಇದಕ್ಕೂ ಮುನ್ನ ಜಾಥಾಗೆ ಚಾಲನೆ ನೀಡಿದ ಸಹಾಯಕ ಅಂಚೆ ಅಧೀಕ್ಷಕ ರಾಧಾಕೃಷ್ಣ ಮಲ್ಯ ಸ್ವಚ್ಚತೆ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಸ್ವಚ್ಚತೆಯಿದ್ದಲ್ಲಿ ಆರೋಗ್ಯವಿರುತ್ತದೆ, ಶುದ್ದ ಹಸಿರು ಪರಿಸರವನ್ನು ಬೆಳೆಸಿದಲ್ಲಿ ಆರೋಗ್ಯವಂತರಾಗಿ ಬಾಳಲು ಸಾಧ್ಯವಾಗುತ್ತದೆ ಎಂದ ಅವರು ಸಾರ್ವಜನಿಕರು ಇದನ್ನು ಅರಿತು ಸ್ವಚ್ಚತೆಗೆ ಒತ್ತು ನೀಡಬೇಕು ಎಂದು ಮನವಿ ಮಾಡಿದರು.
ಅಂಚೆ ಪಾಲಕ ಹೆಚ್.ಜಿ.ಆನಂದ್, ವ್ಯವಸ್ಥಾಪಕ ಪ್ರವೀಣ್, ಅಂಚೆ ನಿರೀಕ್ಷಕ ಸಾಹಿಲ್ ಮಕೀಜಾ, ಇಲಾಖೆಯ ಮಾರುಕಟ್ಟೆ ಪ್ರತಿನಿಧಿ ಹೆಚ್.ಜೆ.ದೊಡ್ಡೇಶ್ ಹಾಜರಿದ್ದರು.