ಮೂಡಿಗೆರೆ : ಪಟ್ಟಣದಲ್ಲಿ ದತ್ತ ಭಕ್ತಾದಿಗಳು ದತ್ತಮಾಲಾಧಾರಣೆ ಮಾಡುವ ಮೂಲಕ ದತ್ತ ಮಾಲಾಧಾರಣೆಗೆ ಚಾಲನೆ ದೊರಕಿತು. ಪಟ್ಟಣದ ಶ್ರೀ ವೇಣುಗೋಪಾಲ ದೇವಸ್ಥಾನದಲ್ಲಿ ದತ್ತ ಭಕ್ತರಿಂದ ಮಾಲಾಧಾರಣೆ ಕಾರ್ಯಕ್ರಮ ನಡೆಯಿತು.
ಸಾಮಾನ್ಯವಾಗಿ ದತ್ತಜಯಂತಿ ಆಚರಣೆ ಮಲೆನಾಡಿನಲ್ಲಿ ಹೆಚ್ಚಿನ ಮಟ್ಟದಲ್ಲಿ ಇದ್ದು, ಡಿ.1ರಿಂದ ಡಿ.12ರ ವರೆಗೆ ನಡೆಯಲಿರುವ ದತ್ತಜಯಂತಿಗೆ ಮಾಲಾಧಾರಿಗಳ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ. ಭಾನುವಾರದಂದು ನಡೆದ ದತ್ತ ಮಾಲಾಧಾರಣೆಯಲ್ಲಿ ಜಿಲ್ಲಾ ಗೋ ರಕ್ಷಾ ಪ್ರಮುಖ್ ಅವಿನಾಶ್,ಬಿಜೆಪಿ ಯುವ ಮುಖಂಡ ಪ್ರವೀಣ್ ಪೂಜಾರಿ ಮೂಡಿಗೆರೆ ತಾಲ್ಲೂಕು ಸಂಯೋಜಕ ಬಣಕಲ್ ವಿನಯ್, ಸಹ ಸಂಯೋಜಕ ಜೇನ್ಬೈಲ್ ಅಜಿತ್, ಚಿರಾಗ್, ಸತ್ಸಂಗ್ ಪ್ರಮುಖ್, ನಗರ ವಿದ್ಯಾರ್ಥಿ ಪ್ರಮುಖ್ ಅನು, ನಗರ ಸಂಯೋಜಕ ಸುಭಾಶ್ ನಗರ ಸಂತೋಷ್, ಮಧು, ಸುರಕ್ಷಾ, ಸಾಮಾಜಿಕ ಜಾಲತಾಣದ ಪ್ರಮುಖ್ ಶಶಾಂಕ್ ಹಾಗೂ ಭಜರಂಗದಳದ ಕಾರ್ಯಕರ್ತರುಗಳು ಹಾಜರಿದ್ದರು.










