ಪುತ್ತೂರು; ತಂದೆಯನ್ನು ಮಚ್ಚಿನಿಂದ ಕಡಿದು ಬರ್ಬರವಾಗಿ ಹತ್ಯೆ ಮಾಡಿದ ಪಾಪಿ ಮಗ…

386
firstsuddi

ಮಂಗಳೂರು: ನಿರುದ್ಯೋಗಿ ಮಗ ತಂದೆಯೊಂದಿಗೆ ಜಗಳವಾಡಿ, ತಂದೆಯನ್ನು ಮಚ್ಚಿನಿಂದ ಕಡಿದು ಕೊಲೆ ಮಾಡಿದ ಘಟನೆ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಪಾಣಾಜೆ ಗ್ರಾಮದ ಬೊಳ್ಳಿಂಬಳದಲ್ಲಿ ನಡೆದಿದೆ. ಮೃತ ವ್ಯಕ್ತಿಯನ್ನು ಪಾಣಾಜೆ ಗ್ರಾಮದ ಬೊಳ್ಳಿಂಬಳ ನಿವಾಸಿ ಕೃಷ್ಣ ನಾಯ್ಕ (65) ಎಂದು ಗುರುತಿಸಲಾಗಿದೆ. ತಂದೆಯನ್ನು ಕೊಲೆ ಮಾಡಿದ ಮಗ ಉದಯ ನಾಯ್ಕ (28)ನನ್ನು ಪೊಲೀಸರು ಬಂಧಿಸಿದ್ದಾರೆ. ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಪಾಣಾಜೆ ಗ್ರಾಮದ ಬೊಳ್ಳಿಂಬಳದ ನಿವಾಸಿಯಾಗಿರುವ ಕೃಷ್ಣ ನಾಯ್ಕ್ ಎಂಬವರು ಮನೆಯಲ್ಲಿ ತನ್ನ ಹೆಂಡತಿ ಮತ್ತು ಮಗ ಉದಯ ನಾಯ್ಕ್ ಎಂಬವರುಗಳೊಂದಿಗೆ ವಾಸವಾಗಿದ್ದು, ಸದರಿಯವರ ಮಗ ಉದಯ ನಾಯ್ಕ್ ನು ಯಾವುದೇ ಕೆಲಸಕ್ಕೆ ಹೋಗದೇ ಮನೆಯಲ್ಲಿರುತ್ತಿದ್ದು, ಈ ಬಗ್ಗೆ ತಂದೆ ಮತ್ತು ಮಗನಿಗೆ ಪದೇ ಪದೇ ಜಗಳವಾಗುತ್ತಿತ್ತು ಎನ್ನಲಾಗಿದೆ. ಬುಧವಾರ ಮಧ್ಯಾಹ್ನ ಕೂಡಾ ಮೃತ ಕೃಷ್ಣ ನಾಯ್ಕ್ ರವರು ತನ್ನ ಮಗನೊಂದಿಗೆ ಜಗಳವಾಡಿದ್ದು, ಸಂಜೆ ಸುಮಾರು 07.30 ಸಮಯಕ್ಕೆ ಪುನಃ ಜಗಳವಾದಾಗ ಕುಪಿತನಾದ ಉದಯ ನಾಯ್ಕ್ ನು ಮನೆಯಲ್ಲಿದ್ದ ಮಚ್ಚಿನಿಂದ ತಂದೆ ಕೃಷ್ಣ ನಾಯ್ಕ್ ರವರ ಕುತ್ತಿಗೆಗೆ ಕಡಿದಿದ್ದು, ಇದರಿಂದ ಗಂಭೀರ ಗಾಯಗೊಂಡ ಕೃಷ್ಣ ನಾಯ್ಕ್ ರವರು ಮನೆಯ ಅಂಗಳದಲ್ಲೇ ಕುಸಿದು ಮೃತಪಟ್ಟಿದ್ದಾರೆ. ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.