ಪುತ್ತೂರು : ಅಕ್ರಮ ಸ್ಪೋಟಕ ಸಾಮಗ್ರಿ ವಶ : ನಾಲ್ಕು ಮಂದಿ ಸೆರೆ…

154
firstsuddi

ಪುತ್ತೂರು : ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ಪುತ್ತೂರು ತಾಲ್ಲೂಕು ನೆಟ್ಟಣಿಗೆ ಮುಡ್ನುರು ಗ್ರಾಮದ ಮಡ್ಯಲ ಮಜಲು ಎಂಬಲ್ಲಿ ಪುತ್ತೂರು ಗ್ರಾಮಾಂತರ ಠಾಣೆ ಪೊಲೀಸ್ ಉಪನಿರೀಕ್ಷಕರು ತಮ್ಮ ಸಿಬ್ಬಂದಿಗಳೊಂದಿಗೆ ದಾಳಿ ನಡೆಸಿ ಅಕ್ರಮವಾಗಿ ಸ್ಫೋಟಕ ಸಾಮಗ್ರಿಗಳನ್ನು ಬಳಸಿ ಸಿಡಿಮದ್ದು ತಯಾರಿಸುತ್ತಿದ್ದುದನ್ನು ಪತ್ತೆಹಚ್ಚಿದ್ದಾರೆ. ಪ್ರಕರಣದ ಆರೋಪಿಗಳಾದ ನರೇಂದ್ರ ಅಲಿಯಾಸ್ ಬಾಬು, ಟಿ ಬಾಬು, ಟಿ ಕಾಳಿ ರಾಜ್, ಎಂ ಕಮಲ ಕನ್ನನ್ ಎಂಬವರನ್ನು ವಶಕ್ಕೆ ಪಡೆದಿರುತ್ತಾರೆ. ಈ ಬಗ್ಗೆ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.