ಮೂಡಿಗೆರೆ : ಬೈಕಿಗೆ ಅಡ್ಡ ಬಂದ ಕಾಡುಕೋಣವನ್ನು ತಪ್ಪಿಸಲು ಹೋಗಿ ಅಪಘಾತ-ಇಬ್ಬರಿಗೆ ಗಂಭೀರ ಗಾಯ…

1370
firstsuddi

ಮೂಡಿಗೆರೆ : ಬೈಕಿಗೆ ಅಡ್ಡ ಬಂದ ಕಾಡುಕೋಣವನ್ನು ತಪ್ಪಿಸಲು ಹೋಗಿ ಬಿದ್ದು ಇಬ್ಬರು ಗಾಯಗೊಂಡಿರುವ ಘಟನೆ ತಾಲ್ಲೂಕಿನ ಬಾಳೂರು ಸಮೀಪದ ನೆರಂಕಿ ಬಳಿ ನಡೆದಿದೆ. ಹಿರೇಬೈಲ್ ಸಮೀಪದ ಬೂದಿಗುಂಡಿಯ ನಿವಾಸಿ ಸಂದೀಪ್ ಹಾಗೂ ಮಂಗಳ ಗಾಯಗೊಂಡಿದ್ದು, ಹಿರೇಬೈಲ್‍ನಿಂದ ತನ್ನ ಸೋದರನೊಂದಿಗೆ ಕಚೇರಿಯ ಕೆಲಸಕ್ಕೆ ತೆರಳುತ್ತಿದ್ದರು ಎನ್ನಲಾಗಿದ್ದು, ಈ ವೇಳೆ ಅಡ್ಡವಾಗಿ ಬಂದ ಕಾಡುಕೋಣವನ್ನು ತಪ್ಪಿಸಲು ಹೋಗಿ ಅಪಘಾತ ಸಂಭವಿಸಿದ್ದು, ತಲೆಗೆ ಬಲವಾಗಿ ಪೆಟ್ಟು ಬಿದ್ದು ರಕ್ತದ ಮಡುವಿನಲ್ಲಿ ಜ್ಞಾನ ಕಳೆದುಕೊಂಡು ಬಿದ್ದವರನ್ನು ಸ್ಥಳೀಯರು ಕಳಸ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದು, ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದ್ದು, ಘಟನೆ ಬಾಳೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.