ಹಾಸನ :ಭಾರತ್ ಪೆಟ್ರೋಲಿಯಂ ವಾಹನ ಮಾಲೀಕರ ಅನುಕೂಲಕ್ಕಾಗಿ ಸಂಚಾರಿ ಡೀಸೆಲ್ ಬಂಕ್ ಆರಂಭಿಸಿದ್ದು.ಇಂದು ತಾಲ್ಲೂಕಿನ ಚನ್ನರಾಯಪಟ್ಟಣದಲ್ಲಿ ಆದಿಚುಂನಗಿರಿ ಮಠದ ಕಾರ್ಯದರ್ಶಿ ಶ್ರೀ ಶಂಭುನಾಥ ಸ್ವಾಮೀಜಿ ಚಾಲನೆ ನೀಡಿದರು. ಕ್ಯಾನಿನಲ್ಲಿ ಡೀಸೆಲ್ ಕೊಂಡು ಹೋಗುವಾಗ ಆಗುವ ಅನಾಹುತವನ್ನು ತಪ್ಪಿಸುವ ಸಲುವಾಗಿ ಹೊಸ ವರ್ಷದ ಕೊಡುಗೆಯಾಗಿ ಭಾರತ್ ಪೆಟ್ರೋಲಿಯಂ ಯೋಜನೆಯನ್ನು ಪ್ರಾರಂಭಿಸಿದ್ದು.ಆರು ಸಾವಿರ ಲೀಟರ್ ಸಾಮರ್ಥ್ಯ ಹೊಂದಿರುವ ಸಂಚಾರಿ ಡೀಸೆಲ್ ಬಂಕ್. ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳುವ ಮೂಲಕ ಇದ್ದ ಸ್ಥಳಕ್ಕೆ ಡೀಸೆಲ್ ತರಿಸಿಕೊಳ್ಳಬಹುದಗಿದೆ. ಈ ಸಂದರ್ಭದಲ್ಲಿ ಭಾರತದಲ್ಲಿ ಪೆಟ್ರೋಲಿಯಂ ಮೈಸೂರು ವಿಭಾಗದ ರಿಟೇಲ್ ಮ್ಯಾನೇಜರ್ ಗುನ್ನ ಜಿ ರಾವ್. ಸಹಾಯಕ ವ್ಯವಸ್ಥಾಪಕ ಅರುಣ್ ಕಾಂತರಾಜ್ ಸೇರಿದಂತೆ ಇತರರು ಇದ್ದರು










