ಮೂಡಿಗೆರೆ : ಮಹಿಳೆಯರು ರಾಜಕೀಯ ಪ್ರವೇಶ ಮಾಡಿದರೆ ಸ್ವಚ್ಛ ಹಾಗೂ ಬ್ರಷ್ಟಾಚಾರ ರಹಿತ ಆಡಳಿತ ನಡೆಸಲು ಸಾಧ್ಯ ಎಂದು ಹಿರಿಯ ಸಿವಿಲ್ ನ್ಯಾಯಾಧೀಶೆ ಎಂ.ಎಸ್.ಶಶಿಕಲಾ ಅವರು ಅಭಿಪ್ರಾಯ ಪಟ್ಟರು.
ಬಿಳಗುಳ ಗ್ರಾಮದಲ್ಲಿ ಬೆಂಗಳೂರು ದಿ ಹಂಗರ್ ಪ್ರಾಜೆಕ್ಟ್, ವಿಕಸನಾ ಸೇವಾ ಸಂಸ್ಥೆ, ತಾಲ್ಲೂಕು ಕಾನೂನು ಸೇವಾ ಸಮಿತಿ ಮತ್ತು ವಕೀಲರ ಸಂಘದ ವತಿಯಿಂದ ವಿವಿಧ ಗ್ರಾ.ಪಂ.ಗಳ ವ್ಯಾಪ್ತಿಯಲ್ಲಿ ಹಮ್ಮಿಕೊಂಡಿರುವ “ಚುನಾವಣಾ ಪ್ರಕ್ರಿಯೆಯಲ್ಲಿ ಭಾಗವಹಿಸುವಿಕೆ ಮೂಲಕ ಮಹಿಳಾ ಸಶಕ್ತೀಕರಣ” ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ನಂತರ ಮಾತನಾಡಿದ ಅವರು ಮಹಿಳೆಯರು ರಾಜಕೀಯ ಪ್ರವೇಶ ಮಾಡಬೇಕು ಎಂಬ ಉದ್ದೇಶದಿಂದಲೇ ಸೇ.50 ರಷು ಮೀಸಲಾತಿ ನೀಡಲಾಗಿದೆ. ಮಹಿಳೆಯರು ಅದನ್ನು ಬಳಿಸಿಕೊಂಡು ಮುಂದೆ ಬರುವುದರ ಜೊತೆಗೆ ಸಮಾಜಕ್ಕೆ ಒಳಿತು ಮಾಡುವ ಬಗ್ಗೆ ಆಲೋಚನೆ ಮಾಡಬೇಕು. ಮಹಿಳೆ ಕೇವಲ ಸಂಸಾರ ನಿರ್ವಹಣೆ ಮಾಡುವುದಕ್ಕೆ ಮಾತ್ರ ಸೀಮಿತಳು ಎಂಬ ಮನೋಭಾವನೆ ದೂರವಾಗುತ್ತಿದೆ. ಇಂದು ಎಲ್ಲಾ ಕ್ಷೇತ್ರಗಳಲ್ಲಿ ತನ್ನ ಸಾಮಥ್ರ್ಯ ತೋರಿಸುವಲ್ಲಿ ಅನೇಕ ಮಹಿಳೆಯರು ಯಶಸ್ವಿಯಾಗಿದ್ದಾರೆ. ಅಂಥವರನ್ನು ಅನುಸರಿಸುವುದರ ಮೂಲಕ ಸಮಾಜದಲ್ಲಿ ಉನ್ನತ ಸ್ಥರಕ್ಕೆ ಏರಿ ಸಮಾಜಕ್ಕೆ ಒಳಿತು ಮಾಡುವ ಕೆಲಸದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು ಎಂದರು.
ತಾ.ಪಂ.ಅಧ್ಯಕ್ಷ ಕೆ.ಸಿ.ರತನ್ ಅವರು ಮಾತನಾಡಿ, 2016ರಲ್ಲಿ ಪಂಚಾಯತ್ ರಾಜ್ ಕಾಯ್ದೆಯನ್ನು ಪುನರ್ ಪರಿಶೀಲನೆ ನಡೆಸಿ ಗಾಮ ಪಂಚಾಯತಿಗಳಿಗೆ ಮಹಿಳೆಯರು ಸ್ಪರ್ಧಿಸಲು ಸೇ.50 ರಷ್ಟು ಮೀಸಲಾತಿ ನೀಡಿ ಬ್ರಷ್ಟಾಚಾರ ರಹಿತ ಆಡಳಿತ ನಡೆಸಲು ಅವಕಾಶ ಕಲ್ಪಿಸಲಾಗಿದೆ. ಇದೇ ರೀತಿಯ ಅವಕಾಶಗಳನ್ನು ವಿಧಾನ ಸಭೆ ಹಾಗೂ ಲೋಕಸಭೆಗಳಿಗೂ ನೀಡಿದಲ್ಲಿ ಇನ್ನೂ ಉತ್ತಮ ರೀತಿಯ ಆಡಳಿತ ನಡೆಸಲು ಅವಕಾಶ ಸಿಕ್ಕಂತಾಗುತ್ತದೆ. ಮಹಿಳೆಯರಿಗೆ ಆಡಳಿತ ನಡೆಸುವ ¨ಗ್ಗೆ ಹೆಚ್ಚಿನ ಮಟ್ಟದಲ್ಲಿ ಜಾಗೃತಿ ಮೂಡಿಸುವ ಅಗತ್ಯವಿದ್ದು ಈ ನಿಟ್ಟಿನಲ್ಲಿ ಕೆಲಸ ಸಾಗುತ್ತಿದೆ. ಪ್ರಸ್ತುತ ಈಗ ಇರುವ ಅವಕಾಶಗಳನ್ನೇ ಬಳಸಿಕೊಂಡು ಮಹಿಳೆಯರು ಉನ್ನತ ಸ್ಥರಕ್ಕೆ ಏರುವ ಪ್ರಯತ್ನ ಮಾಡಬೇಕು ಎಂದು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಹೆಚ್ಚುವರಿ ಸಿವಿಲ್ ನ್ಯಾಯಧೀಶೆ ಪ್ರಕೃತಿ ಕಲ್ಯಾಣ್‍ಪುರ್, ವಕೀಲರ ಸಂಘದ ಅಧ್ಯಕ್ಷ ಮಹೇಶ್, ಸುಗ್ರಾಮ ರಾಜ್ಯಾಧ್ಯಕ್ಷೆ ಶಾಂತಕುಮಾರಿ, ಕಾರ್ಯದರ್ಶಿ ಮಂಜುಳಾ, ತಾಲ್ಲೂಕು ಅಧ್ಯಕ್ಷೆ ಗಂಗಮ್ಮ, ವಿಕಸನ ಸಂಸ್ಥೆ ಸಂಯೋಜಕ ಶ್ರೀನಿವಾಸ್, ನಾಜಿಮ್, ಬಿಳಗುಳ ಅಲ್ತಾಫ್ ಸೇರಿದಂತೆ ನೂರಾರು ಸಂಖ್ಯೆಯಲ್ಲಿ ಮಹಿಳೆಯರು ಮತ್ತು ಗ್ರಾಮಸ್ಥರು ಸೇರಿದ್ದರು.
Home ಸ್ಥಳಿಯ ಸುದ್ದಿ ಮೂಡಿಗೆರೆ:ಮಹಿಳೆಯರು ರಾಜಕೀಯ ಪ್ರವೇಶ ಮಾಡಿದರೆ ಸ್ವಚ್ಛ ರಾಜಕೀಯ ಸಾಧ್ಯ : ನ್ಯಾಯಾಧೀಶೆ ಎಂ.ಎಸ್.ಶಶಿಕಲಾ.










