ಮೂಡಿಗೆರೆ: ಕಲ್ಕುಳಿ ವಿಠ್ಠಲ್ ಹೆಗ್ಗಡೆ ಆಯ್ಕೆ ಸೂಕ್ತ : ಗಣೇಶ್ ಮಗ್ಗಲಮಕ್ಕಿ.

524

ಮೂಡಿಗೆರೆ : ಶೃಂಗೇರಿಯಲ್ಲಿ ನಡೆಯುವ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಅಧ್ಯಕ್ಷರನ್ನಾಗಿ ಕಲ್ಕುಳಿ ವಿಠ್ಠಲ್ ಹೆಗ್ಗಡೆ ಅವರನ್ನು ಆಯ್ಕೆ ಮಾಡಿರುವುದು ಸೂಕ್ತವಾಗಿದೆ ಎಂದು ಮೂಡಿಗೆರೆ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಗಣೇಶ್ ಮಗ್ಗಲಮಕ್ಕಿ ಅವರು ಅಭಿಪ್ರಾಯಪಟ್ಟರು. 
 ಫಸ್ಟ್ ಸುದ್ದಿಯೊಂದಿಗೆ  ಮಾತನಾಡಿದ ಅವರು ಕಲ್ಕುಳಿ ವಿಠ್ಠಲ್ ಹೆಗ್ಗಡೆ ಅವರು ಕಾಡು ಕಿರುಕುಳ, ಕಸ್ತೂರಿ ರಂಗನ್ ವರದಿ, ಮಂಗನ ಬ್ಯಾಟೆ ಮುಂತಾದ ಕೃತಿಗಳನ್ನು ರಚಿಸಿದ್ದಾರೆ. ಅವರು ರಚಿಸಿರುವ ‘ಮಳೆಕಾಡು ಮಲೆನಾಡು’ ಕೃತಿಯು ಬಿಡುಗಡೆಗೆ ಸಿದ್ಧವಾಗಿದ್ದು, ಇದುವರೆಗೂ ಅವರ 170 ಕ್ಕೂ ಹೆಚ್ಚು ಲೇಖನಗಳು ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಕುವೆಂಪು ವಿವಿಯ ದ್ವಿತೀಯ ಬಿಎ ಪದವಿಗೆ ಇವರ ಕೃತಿ ಪಠ್ಯವಾಗಿ ಸೇರ್ಪಡೆಯಾಗಿದೆ. ಪ್ರತೀ ಶುಕ್ರವಾರದಂದು ತಮ್ಮ ಮನೆ, ಗ್ರಾಮ, ಊರು ಸೇರಿದಂತೆ ವಿವಿಧ ಕಡೆಗಳಲ್ಲಿ ಕೃತಿಗಳ ಅವಲೋಕನ ನಡೆಸುತ್ತಿರುತ್ತಾರೆ. ಸದಾ ಸಾಹಿತ್ಯಾಕರ್ಷಕ ಚಟುವಟಿಕೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುವ ಅವರು ನೂರಾರು ಕೃತಿಗಳ ಅವಲೋಕನ ನಡೆಸಿದ್ದಾರೆ. ಸಮ್ಮೇಳನಾ ಅಧ್ಯಕ್ಷರಾಗಲು ಅವರಿಗೆ ಎಲ್ಲಾ ರೀತಿಯ ಅರ್ಹತೆ ಇದ್ದು, ಅವರ ಆಯ್ಕೆ ಸಂತಸ ಉಂಟುಮಾಡಿದೆ ಎಂದು ಹೇಳಿದರು.