ಸಿಲಿಂಡರ್ ಸ್ಪೋಟ- ತಾಯಿ ಮಗಳು ಸಜೀವ ದಹನ…

279
firstsuddi

ಬಳ್ಳಾರಿ : ಸಿಲಿಂಡರ್ ಸ್ಪೋಟಗೊಂಡು ತಾಯಿ ಮಗಳು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ತಾಲ್ಲೂಕಿನ ಸಂಜೀವರಾಯನ ಕೋಟೆಯಲ್ಲಿ ನಡೆದಿದೆ. ತಾಯಿ ಪಾರ್ವತಿ ಹಾಗೂ ಮಗಳು ಹುಲಿಗೆ ಮೃತ ದುರ್ದೈವಿಗಳು ಎಂದು ಗುರುತಿಸಲಾಗಿದ್ದು, ಪಾರ್ವತಿ ಹಾಗೂ ಅವರ ಪತಿಯ ನಡುವಿನ ಜಗಳಕ್ಕೆ ಸಂಬಂಧಿಸಿದಂತೆ ಕೋರ್ಟ್‍ನಲ್ಲಿ ಪ್ರಕರಣ ನಡೆಯುತ್ತಿದ್ದು ಎನ್ನಲಾಗಿದ್ದು, ಇದರಿಂದ ಮನನೊಂದ ತಾಯಿ ಮಗಳು ಇಂದು ಬೆಳಿಗ್ಗೆ 8ಗಂಟೆ ಸುಮಾರಿಗೆ ಮನೆಯಲ್ಲಿರುವ ಸಿಲಿಂಡರ್ ಓಪನ್ ಮಾಡಿ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದ್ದು, ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳ ಸಿಬ್ಬಂದಿ ಭೇಟಿ ನೀಡಿ ಬೆಂಕಿ ನಂದಿಸುವ ಕಾರ್ಯಾಚರಣೆ ಮಾಡಿದ್ದಾರೆ.