ನಿರ್ಭಯಾ ಅತ್ಯಾಚಾರಿಗಳನ್ನು ಗಲ್ಲಿಗೇರಿಸುವವರಿಗೆ 1ಲಕ್ಷ ರೂ ಮೀಸಲಿಟ್ಟ ನಟ ಜಗ್ಗೇಶ್…

779
firstsuddi

ಬೆಂಗಳೂರು : ನಿರ್ಭಯಾ ಅತ್ಯಾಚಾರ ಪ್ರಕರಣದ ಆರೋಪಿಗಳನ್ನು ಗಲ್ಲಿಗೇರಿಸುವ ಹ್ಯಾಂಗ್ ಮ್ಯಾನ್‍ಗೆ ನಟ ನವರಸ ನಾಯಕ ಜಗ್ಗೇಶ್ ಅವರು 1ಲಕ್ಷ ರೂ ಹಣವನ್ನು ಘೋಷಣೆ ಮಾಡಿದ್ದಾರೆ. ಈ ಹಿಂದೆ ಹ್ಯಾಂಗ್ ಮ್ಯಾನ್ ಪವನ್ ಜಲ್ಲಾದ್ ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಾ ನಿರ್ಭಯಾ ಅತ್ಯಾಚಾರಿಗಳನ್ನು ಗಲ್ಲಿಗೇರಿಸುವುದರಿಂದ ಬರುವ ಹಣದಲ್ಲಿ ನಾನು ನನ್ನ ಮಗಳಿಗೆ ಮದುವೆ ಮಾಡುತ್ತೇನೆ. ನಾನು ಬಡತನದಿಂದ ಬೇಸತ್ತು ಹೋಗಿದ್ದೆ. ಈಗಾ ಸರ್ಕಾರ ನನಗೆ ಒಂದು ಲಕ್ಷ ಹಣವನ್ನು ನೀಡುತ್ತದೆ. ಇದರಿಂದ ನಾನು ನನ್ನ ಮಗಳ ಮದುವೆ ಮಾಡುತ್ತೇನೆ ಎಂದು ಹೇಳಿಕೊಂಡಿದ್ದರು. ಈ ಕುರಿತು ಟ್ವೀಟ್ ಮಾಡಿರುವ ಜಗ್ಗೇಶ್ ಅವರು, “ಮಾನ್ಯರೆ ರಾಕ್ಷಸ ಸಂಹಾರ ದೇವರ ನಿಯಮ! ಆ ಕಾರ್ಯದಿಂದ ಬರುವ ಹಣದಿಂದ ಮಗಳ ಮದುವೆ ಮಾಡುವೆ ಎಂದ ನಿಮ್ಮ ಅನಿಸಿಕೆ ಕೇಳಿ ಭಾವುಕನಾದೆ! ನೀವೆ ಆ ಪಾಪಿಗಳ ನೇಣಿಗೇರಿಸಿದರೆ ನಾನು ಕಲೆಯಿಂದ ದುಡಿದ 1ಲಕ್ಷ ರೂ ನಿಮಗೆ ದೇಣಿಗೆಯಾಗಿ ನಿಮ್ಮ ಮಗಳ ಮದುವೆಗೆ ನೀಡುವೆ! ಇಂದೆ ಆ ಹಣ ನಿಮಗಾಗಿ ಮೀಸಲಿಟ್ಟೆ! ದುರುಳ ನಿಗ್ರಹ ದೇವರ ಸೇವೆ! ಹರಿಓಂ..ಎಂದು ಟ್ವೀಟ್ ಮಾಡಿದ್ದಾರೆ.