ಮೂಡಿಗೆರೆ : ರಾಜ್ಯ ಖೇಲೊ ಇಂಡಿಯಾ ಕಬಡ್ಡಿ ಟೀಂ ಮ್ಯಾನೇಜರ್ ಆಗಿ ಶ್ರೀನಿವಾಸ್ ಆಯ್ಕೆ…

218
firstsuddi

ಮೂಡಿಗೆರೆ : ಇದೇ ಜನವರಿ 9 ರಿಂದ 13ರವರೆಗೆ ಅಸ್ಸಾಂನ ಗುವಾಹಟಿಯ ಸೋನಾಪುರದಲ್ಲಿ ನಡೆಯಲಿರುವ ಖೇಲೊ ಇಂಡಿಯಾ ಕರ್ನಾಟಕ ಬಾಲಕರ ಮತ್ತು ಬಾಲಕೀಯರ ಕಬಡ್ಡಿ ಪಂದ್ಯಾವಳಿಗೆ ತಂಡದ ಮ್ಯಾನೇಜರ್ ಆಗಿ ಬೆಟ್ಟಗೆರೆ ಶ್ರೀಮತಿ ನಿಂಗಮ್ಮ ಬೊಮ್ಮಯ್ಯ ಪ್ರೌಢಶಾಲೆಯ ದೈಹಿಕ ಶಿಕ್ಷಣ ಶಿಕ್ಷಕರಾದ ಕೆ.ಆರ್.ಶ್ರೀನಿವಾಸ್ ಆಯ್ಕೆಯಾಗಿದ್ದಾರೆ. ಪ್ರಸ್ತುತ ಇವರು ಚಿಕ್ಕಮಗಳೂರು ಅಮೆಚೂರು ಕಬಡ್ಡಿ ಸಂಸ್ಥೆಯ ಪ್ರಧಾನ ಕಾರ್ಯದರ್ಶಿಯಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ. ಇವರು ಮೂಲತಃ ಮೈಸೂರಿನ ಕೆ.ಆರ್.ನಗರದವರಾಗಿದ್ದು ಬೆಟ್ಟಗೆರೆ ಪ್ರೌಢಶಾಲೆಯಲ್ಲಿ ಹನ್ನೊಂದು ವರ್ಷಗಳಿಂದ ದೈಹಿಕ ಶಿಕ್ಷಣ ಶಿಕ್ಷಕರಾಗಿ ಸೇವೆ ನೀಡುತ್ತಿದ್ದಾರೆ. ರಾಜ್ಯ ಕಬಡ್ಡಿ ಅಸೋಸಿಯೇಷನ್ ಅವರು ಇವರನ್ನು ರಾಜ್ಯ ಕಬಡ್ಡಿ ತಂಡಕ್ಕೆ ಟೀಂ ಮ್ಯಾನೇಜರ್ ಆಗಿ ನೇಮಿಸಿದ್ದು, ಇವರ ಆಯ್ಕೆಗೆ ಬೆಳ್ಳಿ ಹಬ್ಬ ಆಚರಣಾ ಸಮಿತಿ, ಬೆಟ್ಟಿಗೆರೆ ಪ್ರೌಢಶಾಲೆಯ ಸಮಿತಿಯ ಪದಾಧಿಕಾರಿಗಳು, ಶಿಕ್ಷಕರು ಹಾಗೂ ಗ್ರಾಮಸ್ಥರು ಅಭಿನಂದನೆ ಸಲ್ಲಿಸಿದ್ದಾರೆ.