ಸಚಿವ ಜಗದೀಶ್ ಶೆಟ್ಟರ್ ಅವರಿಗೆ ಮಾತೃ ವಿಯೋಗ…

225
firstsuddi

ಹುಬ್ಬಳ್ಳಿ : ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಅವರ ತಾಯಿ ಬಸವಣೆವ್ವ ಶಿವಪ್ಪ ಶೆಟ್ಟರ್(86) ಹೃದಯಾಘಾತದಿಂದ ಇಂದು ನಿಧನರಾಗಿದ್ದಾರೆ. ಹುಬ್ಬಳ್ಳಿಯ ಕೇಶ್ವಾಪುರ ಶಬರಿ ನಗರದಲ್ಲಿರುವ ಸಚಿವ ಜಗದೀಶ್ ಶೆಟ್ಟರ್ ಅವರ ಸಹೋದರ ಎಂಎಲ್‍ಸಿ ಪ್ರದೀಪ್ ಶೆಟ್ಟರ್ ಅವರ ಮನೆಯಲ್ಲಿ ಇಂದು ಮಧ್ಯಾಹ್ನ ಹೃದಯಾಘಾತದಿಂದ ಮೃತಪಟ್ಟಿದ್ದು, ಮೃತರ ಅಂತಿಮ ದರ್ಶನಕ್ಕೆ ಪ್ರದೀಪ್ ಶೆಟ್ಟರ್ ಅವರ ಮನೆಯಲ್ಲಿ ಕಲ್ಪಿಸಲಾಗಿದ್ದು, ನಾಳೆ ಬೆಳಿಗ್ಗೆ 11 ಗಂಟೆಗೆ ಹುಬ್ಬಳ್ಳಿಯಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬದ ಮೂಲಗಳಿಂದ ತಿಳಿದು ಬಂದಿದೆ.