ಮೂಡಿಗೆರೆ : ಅಕ್ರಮವಾಗಿ ಸಾಗಿಸುತ್ತಿದ್ದ ಗಂಧದ ತುಂಡು ವಶ-ಆರೋಪಿಗಳು ಪರಾರಿ…

464
firstsuddi

ಮೂಡಿಗೆರೆ : ತಾಲ್ಲೂಕಿನ ಹ್ಯಾಂಡ್‍ಪೋಸ್ಟ್ ನಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಗಂಧದ ತುಂಡುಗಳನ್ನು ಹಾಗೂ ಸಾಗಾಟಕ್ಕೆ ಬಳಸಿದ ವಾಹನವನ್ನು ಅರಣ್ಯ ಇಲಾಖೆ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ಗಂಧದ ತುಂಡುಗಳನ್ನು ಅಕ್ರಮವಾಗಿ ಸಾಗಿಸುತ್ತಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ಆರಂಭಿಸಿದ ಅರಣ್ಯ ಇಲಾಖೆ ಸಿಬ್ಬಂದಿಗಳು ಸೋಮವಾರ ಬೆಳಿಗ್ಗೆ ಹ್ಯಾಂಡ್‍ಪೋಸ್ಟ್ ನಲ್ಲಿ ಹೋಂಡ ಡಿಯೋದಲ್ಲಿ ಸಾಗಿಸುತ್ತಿದ್ದ ವಾಹನ ಅಡ್ಡ ಹಾಕಿದ್ದು ಆರೋಪಿಗಳು ವಾಹನ ಬಿಟ್ಟು ಪರಾರಿಯಾಗಿದ್ದಾರೆ. ಅರಣ್ಯ ಅಧಿಕಾರಿಗಳು ಗಂಧದ ತುಂಡುಗಳು ಹಾಗೂ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.
ಕಾರ್ಯಾಚರಣೆಯಲ್ಲಿ ಉಪ ಅರಣ್ಯ ಸಂರಕ್ಷಣಾಧಿಕಾರಿಗಳಾದ ಸತೀಶ್, ಎಸಿಎಫ್ ಸೈಯ್ಯದ್ ಹುಸೇನಿ, ಆರ್‍ಎಫ್ಓ ಬಸವರಾಜಪ್ಪ, ಡಿಆರ್‍ಎಪ್‍ಓ ದಿನೇಶ್, ನಂದೀಶ್, ಅರಣ್ಯ ರಕ್ಷಕರಾದ ಹೇಮಂತ್, ಜಯಪ್ರಕಾಶ್, ಕಿಶೋರ್, ಪುಟ್ಟಸ್ವಾಮಿ, ಈಶ್ವರ, ವೆಂಕಟೇಶ್ ಹಾಗೂ ಚಾಲಕ ಸುನೀಲ್ ಮುಂತಾದವರು ಇದ್ದರು.