ಬೆಂಗಳೂರು : ರಾಜ್ಯ ಸರ್ಕಾರ ಮೌಡ್ಯ ನಿಷೇಧ ಕಾಯ್ದೆ ಜಾರಿಗೆ ತಂದ ಹಿನ್ನೆಲೆ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಟ್ವಿಟರ್ ಮೂಲಕ ರಾಜ್ಯ ಸರ್ಕಾರಕ್ಕೆ ಅಭಿನಂದನೆ ತಿಳಿಸಿದ್ದಾರೆ. “ನಾವು ಮೌಢ್ಯನಿಷೇಧ ಕಾಯ್ದೆಯನ್ನು ಜಾರಿಗೆ ತರಲು ಹೊರಟಾಗ ನಮ್ಮನ್ನು ನಿಂದಿಸಿ,ಪೀಡಿಸಿ ಅಪಪ್ರಚಾರ ಮಾಡಿ, ಅದನ್ನು ತಡೆಯಲು ಪ್ರಯತ್ನಿಸಿದ್ದ ಬಿಜೆಪಿ ಈಗ ತಪ್ಪನ್ನು ತಿದ್ದಿಕೊಂಡು ಕಾಯ್ದೆಯನ್ನು ಜಾರಿಗೆ ತಂದದ್ದಕ್ಕೆ ಅಭಿನಂದನೆಗಳು.
ಹಾಗೆಯೇ ಈಗಿನ ‘ನಂಬಿಕೆ’ ಒತ್ತಡಕ್ಕೆ ಬಾಗಿ ‘ಮೂಢನಂಬಿಕೆ’ ಆಗದಿರಲಿ ಎಂದು ತಿರುಗೇಟು ನೀಡಿದರು.











