ಬೆಂಗಳೂರು : ಕನ್ನಡದ ರಿಯಾಲಿಟಿ ಶೋ ‘ಬಿಗ್‍ಬಾಸ್ ಸೀಸನ್ 7’ ಮುಕ್ತಾಯವಾಗಿದ್ದು, ನಟ ಶೈನ್ ಶೆಟ್ಟಿ ಅವರು ‘ಬಿಗ್‍ಬಾಸ್ ಸೀಸನ್ 7’ ರ ವಿಜೇತರಾಗಿ ಹೊರಹೊಮ್ಮಿದ್ದಾರೆ. ಖ್ಯಾತ ಹಾಸ್ಯ ನಟ ಕುರಿ ಪ್ರತಾಪ್ ಅವರು ರನ್ನರ್ ಅಪ್ ಆಗಿ ಹೊರಹೊಮ್ಮಿದ್ದಾರೆ. ನಿನ್ನೆ ನಡೆದ ಗ್ರ್ಯಾಂಡ್ ಫಿನಾಲೆಯಲ್ಲಿ ವಾಸುಕಿ ವೈಭವ್ ಅವರು ಬಿಗ್‍ಬಾಸ್ ಮನೆಯಿಂದ ಹೊರಬಂದರು. ಬಳಿಕ ಹಾಸ್ಯ ನಟ ಕುರಿ ಪ್ರತಾಪ್ ಹಾಗೂ ಶೈನ್ ಶೆಟ್ಟಿ ಅವರ ನಡುವೆ ಪೈಪೋಟಿ ಎದುರಾಗಿತ್ತು. ಬಳಿಕ ಅಂತಿಮವಾಗಿ ಶೈನ್ ಶೆಟ್ಟಿ ಅವರು ವಿಜೇತರಾಗುವ ಮೂಲಕ ಬಿಗ್‍ಬಾಸ್ ಸೀಸನ್ 7 ರ ಕಿರೀಟವನ್ನು ತಮ್ಮ ಮುಡಿಗೇರಿಸಿಕೊಂಡಿದ್ದು, ಬಿಗ್‍ಬಾಸ್ ವಿನ್ನರ್ ಗೆ ನಿಗದಿ ಪಡಿಸಿದ್ದ 51 ಲಕ್ಷ ರೂ ಹಾಗೂ ಪ್ರಾಯೋಜಕರಿಂದ 11 ಲಕ್ಷ ರೂ ಸೇರಿದಂತೆ 61ಲಕ್ಷ ರೂ ಹಣವನ್ನು ತಮ್ಮದಾಗಿಸಿಕೊಂಡಿದ್ದಾರೆ. ಅಲ್ಲದೇ ಟಾಟಾ ಮೋಟಾರ್ಸ್ ಅವರ ಅಲ್ಟ್ರೋಸ್ ಕಾರ್ ಶೈನ್ ಶೆಟ್ಟಿ ಅವರಿಗೆ ದೊರೆತಿದೆ.










