ಚಪ್ಪಲಿಯನ್ನು ಚಪ್ಪರಿಸಿ ತಿಂದ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ-ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೋ ವೈರಲ್…

571
firstsuddi

ಮುಂಬೈ : ಬಾಲಿವುಡ್ ನಟಿ, ಕರಾವಳಿ ಬೆಡಗಿ ಶಿಲ್ಪಾ ಶೆಟ್ಟಿ ಅವರು ಚಪ್ಪಲಿಯನ್ನು ಚಪ್ಪರಿಸಿ ತಿಂದಿರುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಅರೇ ಇದೇನಪ್ಪ ಶಿಲ್ಪಾ ಶೆಟ್ಟಿ ಅವರು ಚಪ್ಪಲಿಯನ್ನ ತಿಂತಿದ್ದಾರೆ ಅಂತಾ ನೋಡ್ತಿದ್ದೀರಾ? ಶಿಲ್ಪಾ ಶೆಟ್ಟಿ ಅವರು ತಿಂದಿರುವುದು ಚಪ್ಪಲಿಯಲ್ಲ, ಚಪ್ಪಲಿ ಆಕಾರದಲ್ಲಿರುವ ಚಾಕಲೇಟ್ ಕೇಕ್. ಚಪ್ಪಲಿ ಆಕಾರದ ಕೇಕ್‍ನ್ನು ತಿನ್ನುತ್ತಿರುವ ವೀಡಿಯೋವನ್ನು ಸ್ವತಃ ಶಿಲ್ಪಾ ಶೆಟ್ಟಿ ಅವರೇ ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಪೋಸ್ಟ್ ಮಾಡಿದ್ದು, ಸದ್ಯ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ. ವೀಡಿಯೋದಲ್ಲಿ ಶಿಲ್ಪಾ ಶೆಟ್ಟಿ ಅವರು ವಿಶೇಷ ಭಾನುವಾರದ ವಿಶೇಷ ಕೇಕ್ ಎಂದು ಉಲ್ಲೇಖಿಸಿದ್ದಾರೆ.