ಚಂಡೀಗಢ : ಶೌಚಾಲಯಕ್ಕೆ ತೆರಳಿದ್ದ ಮಹಿಳೆಯನ್ನು ಚಾಕು ತೋರಿಸಿ ಅಪಹರಿಸಿ ಅತ್ಯಾಚಾರ ಎಸಗಿರುವ ಘಟನೆ ಹರಿಯಾಣದ ಕರ್ನಲ್ ಎಂಬಲ್ಲಿ ನಡೆದಿದೆ. ಮಹಿಳೆ ಭಾನುವಾರ ತನ್ನ ಪತಿಯೊಂದಿಗೆ ಸಂಬಂಧಿಕರನ್ನು ಭೇಟಿಯಾಗಲು ಪಾಣಿಪತ್ಗೆ ತೆರಳುತ್ತಿದ್ದರು. ಈ ವೇಳೆ ರಾತ್ರಿ 11 ಗಂಟೆ ಸುಮಾರಿಗೆ ಟೋಲ್ ಪ್ಲಾಜಾ ಬಳಿ ಬಸ್ಗಾಗಿ ಕಾಯುತ್ತಿದ್ದರು. ಬಳಿಕ ಮಹಿಳೆ ಶೌಚಾಲಯಕ್ಕೆಂದು ತೆರಳಿದ್ದು, ಬಳಿಕ ಅಲ್ಲೇ ಹೊರಗಡೆ ಇದ್ದ ಕಾಮುಕರು ಮಹಿಳೆಗೆ ಚಾಕು ತೋರಿಸಿ ಅಪಹರಿಸಿ ಅತ್ಯಾಚಾರ ಎಸಗಿರುವುದಾಗಿ ಮಹಿಳೆ ವಿಚಾರಣೆ ವೇಳೆ ತಿಳಿಸಿದ್ದಾರೆ. ಅಲ್ಲದೇ ಕಾಮುಕರು ಅತ್ಯಾಚಾರ ಎಸಗಿದ ಬಳಿಕ ತಮ್ಮ ಫೋನ್ ನಂಬರ್ ಮಹಿಳೆಯ ಬಳಿ ಬಿಟ್ಟೋಗಿದ್ದು, ಬಳಿಕ ಪೊಲೀಸರು ಮಹಿಳೆಯ ಬಳಿಯಿದ್ದ ಕಾಮುಕರ ಫೋನ್ ನಂಬರ್ ಹಿಡಿದು ಇಬ್ಬರು ಕಾಮುಕರನ್ನು ಬಂಧಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ.










