ಚಿಕ್ಕಮಗಳೂರು : ಬಾರಿ ಬಿಸಿಲಿನಿಂದ ಬಸವಳಿದಿದ್ದ ಮಲೆನಾಡಿನ ಶೃಂಗೇರಿಗೆ ಇಂದು ಮೊದಲ ಮಳೆ ಸಿಂಚನವಾಯಿತು. ಕಳೆದ ನಾಲ್ಕು ತಿಂಗಳಿಂದ ಬಿಸಿಲಿನ ತಾಪಕ್ಕೆ ನಲುಗಿದ ಮಲೆನಾಡ ಜನತೆಗೆ ಅರ್ಧಗಂಟೆಗಳ ಕಾಲ ಸುರಿದ ಸಾಧಾರಣ ಮಳೆ ಖುಷಿ ನೀಡಿದೆ. ಶೃಂಗೇರಿ ಸುತ್ತಮುತ್ತ ಅನಿರೀಕ್ಷಿತ ಮಳೆಯಿಂದ ಸಾರ್ವಜನಿಕರು ಮತ್ತು ಬೈಕ್ ಸವಾರರು ಬಸ್ ನಿಲ್ದಾಣ, ಹೋಟೆಲ್, ಮಳಿಗೆಗಳು ಸೇರಿ ಇತರೆಡೆ ಆಶ್ರಯ ಪಡೆದು ಪರದಾಡುವಂತಾಯಿತು. ಬಿಸಿಲಿನ ತಾಪಕ್ಕೆ ನಲುಗಿದ ಮಲೆನಾಡ ಜನತೆಗೆ ಇಂದು ಮಧ್ಯಾಹ್ನ ಸುರಿದ ವರ್ಷಧಾರೆ ತಂಪೆರೆಯಿತು.










