ಚಿಕ್ಕಮಗಳೂರು : ಬೈಕ್‍ಗೆ ಲಾರಿ ಡಿಕ್ಕಿ-ಬೈಕ್ ಸವಾರನಿಗೆ ಗಂಭೀರ ಗಾಯ…

209
firstsuddi

ಚಿಕ್ಕಮಗಳೂರು : ಬೈಕ್‍ಗೆ ಲಾರಿ ಡಿಕ್ಕಿ ಹೊಡೆದು ಬೈಕ್ ಸವಾರ ಗಂಭೀರ ಗಾಯಗೊಂಡಿರುವ ಘಟನೆ ನಗರದ ಎನ್.ಎಂ.ಸಿ. ಸರ್ಕಲ್ ಬಳಿ ನಡೆದಿದೆ. ಘಟನೆಯಲ್ಲಿ ನಿವೃತ್ತ ಎಎಸ್‍ಐ ಚಿಕ್ಕೇಗೌಡ ಎಂಬುವವರು ಗಂಭೀರ ಗಾಯಗೊಂಡಿದ್ದಾರೆ. ಲಾರಿ ಡಿಕ್ಕಿ ಹೊಡೆದ ರಭಸಕ್ಕೆ ಬೈಕ್ ಸವಾರ ಲಾರಿ ಚಕ್ರದಡಿ ಸಿಲುಕಿ ಸವಾರನ ಎರಡು ಕಾಲು ಸಂಪೂರ್ಣ ಜಖಂ ಆಗಿದ್ದು, ಕೂಡಲೇ ಗಾಯಾಳು ಬೈಕ್ ಸವಾರನನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದ್ದು, ಈ ಕುರಿತು ಟ್ರಾಫಿಕ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.