ಬಣಕಲ್: ಕ್ರೀಡಾಕೂಟಗಳನ್ನು ಗ್ರಾಮೀಣ ಪ್ರದೇಶಗಳಲ್ಲಿ ಆಯೋಜಿಸುವ ಮೂಲಕ ಗ್ರಾಮೀಣ ಪ್ರತಿಭೆಗಳನ್ನು ಪ್ರೋತ್ಸಾಹಿಸುವ ಅಗತ್ಯವಿದೆ ಎಂದು ನಿಡುವಾಳೆ ಗ್ರಾ.ಪಂ ಸದಸ್ಯ ವಿಜೇಂದ್ರಗೌಡ ಹೇಳಿದರು.
ಚಂದುವಳ್ಳಿಯ ವಿನಾಯಕ ಕ್ರಿಕೇಟರ್ಸ್ ವತಿಯಿಂದ ನಡೆದ ಕ್ರಿಕೆಟ್ ಟೂರ್ನಮೆಂಟ್ನ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ಕ್ರೀಡೆಯಲ್ಲಿ ಸೋಲು ಗೆಲುವು ಸಾಮಾನ್ಯವಾಗಿದ್ದು ಎರಡನ್ನು ಸಮಾನವಾಗಿ ತೆಗೆದುಕೊಂಡು ಹೋಗಬೇಕು. ಕ್ರೀಡೆಗಳು ಯುವ ಸಮುದಾಯವನ್ನು ಒಂದೆಡೆ ಸೇರಿಸುವ ವೇದಿಕೆಯಾಗಿದೆ. ಮಾನಸಿಕ ಮತ್ತು ದೈಹಿಕ ಅಭಿವೃದ್ದಿಗೆ ಕ್ರೀಡೆ ಸಹಕಾರಿಯಾಗಿದೆ ಎಂದರು.
ಬಾಳೂರು ತಂಡ ಪ್ರಥಮ ಹಾಗೂ ಗಬ್ಗಲ್ ತಂಡ ದ್ವಿತೀಯ ಬಹುಮಾನ ಪಡೆಯಿತು. ಕೂವೆ ಗ್ರಾ.ಪಂ ಸದಸ್ಯರಾದ ಉದಯಗೌಡ, ದಿನಕರ್ಬಾಬು, ಗ್ರಾಮಸ್ಥರಾದ ರಜಿತ್ಗೌಡ, ಬೋಬೆಗೌಡ, ಸಾಗರ್, ಶಿವಪ್ಪ ಚಂದುವಳ್ಳಿ, ಸುಂದರ್ ಟೈಲರ್, ನಾರಾಯಣ, ರವಿ, ಬಾಳೂರು ಪಿಎಸ್ಐ ಮೂರ್ತಿ, ಆಯೋಜಕ ರಮೇಶ್, ವಿನಾಯಕ ಕ್ರೀಕೆಟರ್ಸ್ ಹಾಗೂ ಬಾಳೂರು ಹಸಲರ ಸಂಘದ ಪಧಾಧಿಕಾರಿಗಳು ಇದ್ದರು.
Home ಸ್ಥಳಿಯ ಸುದ್ದಿ ಮೂಡಿಗೆರೆ : ಕ್ರೀಡಾಕೂಟಗಳನ್ನು ಗ್ರಾಮೀಣ ಪ್ರದೇಶಗಳಲ್ಲಿ ಆಯೋಜಿಸುವ ಮೂಲಕ ಗ್ರಾಮೀಣ ಪ್ರತಿಭೆಗಳನ್ನು ಪ್ರೋತ್ಸಾಹಿಸುವ ಅಗತ್ಯವಿದೆ :...










