ಮೂಡಿಗೆರೆ : ತಾಲ್ಲೂಕು ಕಛೇರಿಯಲ್ಲಿ ಅಕ್ರಮ-ಸಕ್ರಮ ನೂತನ ಸಮಿತಿಯ ಮೊದಲ ಸಭೆ…

822
firstsuddi

ಮೂಡಿಗೆರೆ : ಪಟ್ಟಣದ ತಾಲ್ಲೂಕು ಕಛೇರಿಯಲ್ಲಿ ಅಕ್ರಮ-ಸಕ್ರಮ ನೂತನ ಸಮಿತಿಯ ಮೊದಲ ಸಭೆ ನಡೆಯಿತು. ಶಾಸಕ ಎಂ.ಪಿ.ಕುಮಾರಸ್ವಾಮಿ ಅವರು ಅಧ್ಯಕ್ಷರಾಗಿರುವ ಅಕ್ರಮ-ಸಕ್ರಮ ಸಮಿತಿಯಲ್ಲಿ ಜಿಪಂ ಮಾಜಿ ಸದಸ್ಯ ಶಿವೇಗೌಡ, ಗ್ರಾ.ಪಂ. ಸದಸ್ಯ ಹೆಸಗಲ್ ಗಿರೀಶ್ ಹಾಗೂ ಹಳಿಯೂರು ಸುಧಾ ನಾರಾಯಣ್ ಆಚಾರ್ ಅವರು ಸದಸ್ಯರಾಗಿ ನೇಮಕವಾಗಿದ್ದಾರೆ.
ಸಭೆಯನ್ನು ಉದ್ದೇಶಿಸಿ ಮಾತನಾಡಿದ ಶಾಸಕ ಎಂ.ಪಿ.ಕುಮಾರಸ್ವಾಮಿ ಅವರು ತಾಲ್ಲೂಕಿನಲ್ಲಿ ಸಲ್ಲಿಕೆಯಾಗಿರುವ ಅರ್ಜಿಗಳ ಮಾಹಿತಿಯನ್ನು ತೆಗದುಕೊಳ್ಳಲಾಗಿದೆ. ತಾಲ್ಲೂಕು ಕಛೇರಿಯಲ್ಲಿ 94 ಸಿ ಅರ್ಜಿ, ನಮೂನೆ 53 ರ ಅರ್ಜಿಗಳು ಸಾವಿರಾರು ಸಂಖ್ಯೆಯಲ್ಲಿ ಬಂದಿವೆ. ಆದರೆ ಈ ಅರ್ಜಿಗಳ ಸಕಾಲಿಕ ವಿಲೇವಾರಿಯಾಗದೆ ಕಛೇರಿಯಲ್ಲಿ ಧೂಳು ಹಿಡಿದು ಕುಳಿತಿವೆ. ನಿಜವಾದ ಫಲಾನುಭವಿಗಳಿಗೆ ಕುಡಲೇ ಸಾಗುವಳಿ ಚೀಟಿಯನ್ನು ನೀಡಲು ಹಾಗೂ ಹಕ್ಕು ಪತ್ರ ನೀಡಲು ಕ್ರಮ ಕೈಗೊಳ್ಳಲಾಗುವುದು. ಇದರ ಜೊತೆಗೆ ಅರ್ಜಿ ಹಾಗೂ ದಾಖಲೆಗಳಲ್ಲಿ ವ್ಯತ್ಯಾಸವಿರುವ ಫಲಾನುಭವಿಗಳಿಗೆ ಸೂಕ್ತ ಮಾಹಿತಿಯೊಂದಿಗೆ ದಾಖಲೆಗಳನ್ನು ಸರಿಪಡಿಸಿಕೊಳ್ಳಲು ಕಾಲಾವಕಾಶ ನೀಡಲಾಗುವುದು. ಈ ವಿಚಾರದಲ್ಲಿ ಹಲವು ಮಧ್ಯವರ್ತಿಗಳು ಕೆಲಸ ಮಾಡಸಿಕೊಡುವುದಾಗಿ ಹಣ ಪಡೆದು ಮೋಸಮಾಡುತ್ತಿದ್ದು, ಇಂಥಹ ಕೃತ್ಯ ಎಸಗುವವರಿಂದ ಎಚ್ಚರದಿಂದ ಇರಬೇಕು ಎಂದು ಮನವಿ ಮಾಡಿದರು.
ಸಭೆಯಲ್ಲಿ ನೂತನ ಸದಸ್ಯರುಗಳಾದ ವಿ.ಕೆ.ಶಿವೇಗೌಡ, ಹೆಸಗಲ್ ಗಿರೀಶ್, ಸುಧಾ ನಾರಾಯಣ ಆಚಾರ್, ಕಂದಾಯ ಇಲಾಖೆ ಅಧಿಕಾರಿಗಳು, ಅರ್ಜಿದಾರರು ಸಾರ್ವಜನಿಕರು ಇದ್ದರು.