ಇಂಡಿಯನ್-2 ಚಿತ್ರೀಕರಣ ವೇಳೆ ಕ್ರೇನ್ ಅಪಘಾತ-ನಟ ಕಮಲ್ ಹಾಸನ್‍ಗೆ ಸಮ್ಮನ್ಸ್…

238
firstsuddi

ಚೆನ್ನೈ : ತಮಿಳು ನಟ ಕಮಲ್ ಹಾಸನ್ ಅವರು ಅಭಿನಯಿಸುತ್ತಿರುವ ಇಂಡಿಯನ್-2 ಚಿತ್ರದ ಚಿತ್ರೀಕರಣದ ವೇಳೆ ಕ್ರೇನ್ ಅಪಘಾತ ಸಂಭವಿಸಿದ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಅಪರಾಧ ವಿಭಾಗದ ಪೊಲೀಸರು ನಟ ಕಮಲ್ ಹಾಸನ್ ಅವರಿಗೆ ಸಮ್ಮನ್ಸ್ ನೀಡಿದ್ದಾರೆ. ಫೆ.19ರಂದು ಚೆನ್ನೈನ ಇವಿಪಿ ಫಿಲ್ಮ್ ಸಿಟಿಯಲ್ಲಿ ನಿರ್ದೇಶಕ ಶಂಕರ್ ಅವರು ನಿರ್ದೇಶಿಸುತ್ತಿರುವ ಇಂಡಿಯನ್-2 ಚಿತ್ರದ ಚಿತ್ರೀಕರಣಕ್ಕಾಗಿ ಸೆಟ್ ನಿರ್ಮಾಣ ಮಾಡಲು ಕ್ರೇನ್‍ನ್ನು ಬಳಸಲಾಗಿತ್ತು. ಈ ವೇಳೆ ಚಾಲಕನ ನಿಯಂತ್ರಣ ತಪ್ಪಿ ಕ್ರೇನ್ ಉರುಳಿ ಬಿದ್ದು ಸಹ ನಿರ್ದೇಶಕ ಕೃಷ್ಣಾ, ಚಂದ್ರನ್ ಹಾಗೂ ಮಧು ಎಂಬುವವರು ಕ್ರೇನ್ ಅಡಿ ಸಿಲುಕಿ ಮೃತಪಟ್ಟಿದ್ದರು. ಈ ಹಿನ್ನೆಲೆ, ನಟ ಕಮಲ್ ಹಾಸನ್ ಅವರು ಸೇರಿದಂತೆ ಅಪಘಾತದ ವೇಳೆ ಸ್ಥಳದಲ್ಲಿ ಇದ್ದವರಿಗೂ ಕೂಡಾ ಪೊಲೀಸರು ಸಮ್ಮನ್ಸ್ ನೀಡಿದ್ದಾರೆ.