ಸಚಿವ ಕೆ.ಎಸ್. ಈಶ್ವರಪ್ಪ ಅವರ ನಿವಾಸದಲ್ಲಿ ಅಗ್ನಿ ಅವಘಡ…!

182
firstsuddi

ಬೆಂಗಳೂರು : ಸಚಿವ ಕೆ.ಎಸ್. ಈಶ್ವರಪ್ಪ ಅವರ ನಿವಾಸದಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, ಈಶ್ವರಪ್ಪ ಹಾಗೂ ಅವರ ಪತ್ನಿ ಅವಘಡದಿಂದ ಪಾರಾಗಿದ್ದಾರೆ. ನಿನ್ನೆ ರಾತ್ರಿ ಈಶ್ವರಪ್ಪ ಅವರ ಸರ್ಕಾರ ಬಂಗಲೆಯ ಬೆಡ್ ರೂಮಿನಲ್ಲಿ ಎಸಿ ಹಾಕುತ್ತಿದ್ದಂತೆ ಏಕಾಏಕಿ ಬೆಂಕಿ ಕಾಣಿಸಿಕೊಂಡಿದ್ದು, ಕೂಡಲೇ ಈಶ್ವರಪ್ಪ ಅವರ ಅಳಿಯ ಅಗ್ನಿಶಾಮಕ ದಳ ಸಿಬ್ಬಂಧಿಗೆ ಕರೆ ಮಾಡಿದ್ದಾರೆ. ಅಗ್ನಿಶಾಮಕ ಸಿಬ್ಬಂಧಿಗಳು ಘಟನಾ ಸ್ಥಳಕ್ಕೆ ಬರುವಷ್ಠರಲ್ಲಿ ಬೆಡ್ ರೂಮಿನಲ್ಲಿದ್ದ ಟಿವಿ, ಕಬೋರ್ಡ್ ಹಾಗೂ ಕೆಲವು ದಾಖಲೆಗಳು ಬೆಂಕಿಯಿಂದ ಸುಟ್ಟು ಹೋಗಿದ್ದು, ಸರ್ಕಾರಿ ಬಂಗಲೆಯಲ್ಲಿ ಬೆಂಕಿ ಕಾಣಿಸುತ್ತಿದ್ದಂತೆ ಈಶ್ವರಪ್ಪ ದಂಪತಿ ಕೂಡಲೇ ಪಕ್ಕದಲ್ಲಿಯೇ ಇದ್ದ ತಮ್ಮ ಸ್ವಂತ ಮನೆಗೆ ತೆರಳಿದ್ದಾರೆ.