ಮೂಡಿಗೆರೆ : ಇಡೀ ವಿಶ್ವದಾಧ್ಯಂತ ಕೊರೊನಾ ವೈರಸ್ ವ್ಯಾಪಕವಾಗಿ ಹರಡಿ ಭಾರತದಲ್ಲಿ ಈಗಾಗಲೇ 16 ಮಂದಿಯನ್ನು ಬಲಿ ಪಡೆದಿದ್ದು, ಈ ಹಿನ್ನೆಲೆ ಪ್ರಧಾನಿ ನರೇಂದ್ರ ಮೋದಿ ಅವರು ಕೊರೊನಾ ವೈರಸ್ ನಿಯಂತ್ರಣಕ್ಕಾಗಿ ಭಾರತ ಲಾಕ್ಡೌನ್ ಮಾಡಿ ಆದೇಶ ಹೊರಡಿಸಿದ್ದಾರೆ. ಹೀಗಿದ್ದರೂ ಲಾಕ್ಡೌನ್ ಆದೇಶವನ್ನು ಪಾಲಿಸದೆ ಮನೆಯಿಂದ ಹೊರಗೆ ಅನಗತ್ಯವಾಗಿ ತಿರುಗಾಡುತ್ತಿರುವವರಿಗೆ ಮೂಡಿಗೆರೆ ಪೊಲೀಸರು ಲಾಠಿ ರುಚಿಯನ್ನು ತೋರಿಸಿದ್ದಾರೆ. ಮೂಡಿಗೆರೆ ಸಬ್ ಇನ್ಸ್ ಪೆಕ್ಟರ್ ರವಿ ಹಾಗೂ ಇನ್ಸ್ ಪೆಕ್ಟರ್ ಜಗನ್ನಾಥ್ ಅವರ ನೇತೃತ್ವದಲ್ಲಿ ಪೊಲೀಸರು ಪಟ್ಟಣದ ಮೂಲೆ ಮೂಲೆಯಲ್ಲಿ ರಾತ್ರಿ ಹಗಲು ಎನ್ನುವುದನ್ನು ಲೆಕ್ಕಿಸದೆ ಗಸ್ತು ತಿರುಗುತ್ತಾ ಕಾರ್ಯಾಚರಣೆ ನಡೆಸುತ್ತಿದ್ದು, ಈ ವೇಳೆ ರಸ್ತೆಯಲ್ಲಿ ಅನಗತ್ಯವಾಗಿ ತಿರುಗಾಡುತ್ತಿರುವವರಿಗೆ ಲಾಠಿ ರುಚಿಯನ್ನು ತೋರಿಸುತ್ತಿದ್ದಾರೆ.









