ಚಿಕ್ಕಮಗಳೂರು : ಹಸಿವಿನ ದವಡೆಗೆ ಸಿಲುಕಿರುವ ಬೀದಿ ಶ್ವಾನಗಳಿಗೆ ಆಹಾರ ನೀಡಿ : ರೋಬೆನ್ ಮೋಸೆಸ್.

302
firstsuddi

ಚಿಕ್ಕಮಗಳೂರು : ದೇಶಾದ್ಯಂತ ಕೊರೊನಾ ವೈರಸ್ ಭೀತಿ ಹೆಚ್ಚಾಗುತ್ತಿರುವ ಹಿನ್ನೆಲೆ, ಭಾರತ ಲಾಕ್‍ಡೌನ್ ಆಗಿದ್ದು, ದಿನಸಿ ಮತ್ತು ಔಷಧಿ ಅಂಗಡಿಗಳನ್ನು ಹೊರತುಪಡಿಸಿದರೆ ಹೋಟೆಲ್, ಬೇಕರಿ, ಕಲ್ಯಾಣ ಮಂಟಪ, ಗಾಡಿ ಕ್ಯಾಂಟೀನ್‍ಗಳನ್ನು ನಂಬಿಕೊಂಡು ಬದುಕುತಿದ್ದ ಬೀದಿ ಶ್ವಾನಗಳು ಆಹಾರ ಇಲ್ಲದೇ ಪರದಾಡುತಿದ್ದುದನ್ನು ಕಂಡ ನಗರದ ಪ್ರಾಣಿದಯಾ ಸಂಘದ ಕಾರ್ಯಕರ್ತರು ಹಸಿವಿನ ದವಡೆಗೆ ಸಿಲುಕಿರುವ ಬೀದಿ ಶ್ವಾನಗಳಿಗೆ ಆಹಾರ ನೀಡಿದರು.
ಫಸ್ಟ್ ಸುದ್ದಿಯೊಂದಿಗೆ ಮಾತನಾಡಿದ ಪ್ರಾಣಿದಯಾ ಸಂಘದ ಪ್ರಧಾನ ಕಾರ್ಯದರ್ಶಿ ರೋಬೆನ್ ಮೋಸೆಸ್ ಮನುಷ್ಯ ಮಾಡಿದ ತಪ್ಪಿಗೆ ಮೂಕಪ್ರಾಣಿಗಳು ಆಹಾರವಿಲ್ಲದೆ ಪರದಾಡುತ್ತಿದ್ದು, ಶ್ವಾನಗಳು ಹುಲ್ಲು ಸೊಪ್ಪು ತಿನ್ನುವುದಿಲ್ಲ. ಮನುಷ್ಯನ ಹಾಗೆ ಅನ್ನ ನೀರು ಕುಡಿದು ಬದುಕಬೇಕು. ಕೊರೊನಾ ಸಂಕಟದ ಈ ದಿನಗಳಲ್ಲಿ ಯಾವುದೇ ಆಹಾರ ಮೂಲವಿಲ್ಲದೆ ಹಸಿವಿನ ದವಡೆಗೆ ಸಿಲುಕಿರುವ ಅನಾಥ ಬೀದಿ ಶ್ವಾನಗಳಿಗೆ ನೀರು, ಆಹಾರ ನೀಡಿ ಎಂದು ಮನವಿ ಮಾಡಿದರು. ಈ ಸಂದರ್ಭದಲ್ಲಿ ಕಾರ್ಯಕರ್ತರಾದ ಕಾರ್ತಿಕ್ ಜಿ. ಚೆಟ್ಟಿಯಾರ್, ಸುದೀಪ್ ಹಾಗೂ ಸಂತೋಷ್ ಇದ್ದರು.