ಮೂಡಿಗೆರೆ : ದೇಶಾದ್ಯಂತ ಕೊರೊನಾ ವೈರಸ್ ಭೀತಿ ಹೆಚ್ಚಾಗುತ್ತಿರುವ ಹಿನ್ನೆಲೆ, ಭಾರತ ಲಾಕ್ಡೌನ್ ಆಗಿದ್ದು, ಕೊರೊನಾ ವೈರಸ್ ಹರಡದಂತೆ ತಡೆಯಲು ಲಾಕ್ ಡೌನ್ ಜಾರಿಯಾಗಿದ್ದರೂ ಜನರು ಮಾತ್ರ ಗಂಭೀರವಾಗಿ ಪರಿಗಣಿಸದ ಹಿನ್ನಲೆ ಮೂಡಿಗೆರೆ ಪಟ್ಟಣದಲ್ಲಿ ಲಾಕ್ ಡೌನ್ ನ್ನು ಮತ್ತಷ್ಟು ಬಿಗಿಗೊಳಿಸಿದ್ದು, ಪ್ರತಿಯೊಬ್ಬರು ಮನೆಯಲ್ಲೇ ಇರಬೇಕು. ಉದ್ದೇಶವಿಲ್ಲದೆ ಅನಗತ್ಯವಾಗಿ ಯಾರಾದರೂ ಹೊರಗೆ ಬಂದು ರಸ್ತೆಯಲ್ಲಿ ತಿರುಗಾಡಿದರೆ ಶಿಸ್ತುಕ್ರಮ ಜರುಗಿಸಲಾಗುವುದು ಎಂದು ತಹಸೀಲ್ದಾರ್ ರಮೇಶ್ ಅವರು ಎಚ್ಚರಿಸಿದ್ದಾರೆ.
ಪಟ್ಟಣದ ಕೊಲ್ಲಿಬೈಲ್ ಕೂಡುರಸ್ತೆ, ಲಯನ್ಸ್ ವೃತ್ತ, ಹ್ಯಾಂಡ್ ಪೋಸ್ಟ್ ಸರ್ಕಲ್ ಬಳಿ ಬ್ಯಾರಿಕೇಡ್ ಗಳನ್ನು ಅಳವಡಿಸಿದ್ದು, ದಿನದ 24ಗಂಟೆ ರಸ್ತೆಗಳಲ್ಲಿ ಪೊಲೀಸರು ಗಸ್ತು ತಿರುಗುತ್ತಿದ್ದು, ಕಾರಣ ಇಲ್ಲದೆ ರಸ್ತೆಯಲ್ಲಿ ತಿರುಗಾಡಿದರೆ ಸರ್ಕಾರದ ಆದೇಶದಂತೆ ಕ್ರಮ ಕೈಗೊಳ್ಳಲಾಗುವುದು ಎಂದರು. ಕುಟುಂಬ ಸದಸ್ಯರ ಜೊತೆ ಎಲ್ಲರೂ ಮನೆಯಲ್ಲೇ ಇರಬೇಕು. ಅಗತ್ಯ ವಸ್ತು ಬೇಕಾದಲ್ಲಿ ಮನೆಯಿಂದ ಒಬ್ಬರೇ ಬಂದು ಪಡೆದುಕೊಳ್ಳಬೇಕು. ಕಡ್ಡಾಯವಾಗಿ ಮಾಸ್ಕ್ ಬಳಸಬೇಕು. ಹಾಗೂ ಅಂಗಡಿಗಳಿಗೆ ಹೋದಲ್ಲಿ ಅಂತರ ಕಾಯ್ದುಕೊಳ್ಳಬೇಕು. ವಾಯುವಿಹಾರ ಹಾಗೂ ನಾನಾ ಕಾರ್ಯಕ್ರಮ ಹೆಸರಿನಲ್ಲಿ ಹೊರಗಡೆ ಸುತ್ತಾಡಬಾರದು. ಎಲ್ಲಾ ಸಾರ್ವಜನಿಕರು ಪೊಲೀಸರಿಗೆ ಸಹಕಾರ ನೀಡಬೇಕು ಎಂದರು.
Home ಸ್ಥಳಿಯ ಸುದ್ದಿ ಮೂಡಿಗೆರೆ : ಉದ್ದೇಶವಿಲ್ಲದೆ ಅನಗತ್ಯವಾಗಿ ಯಾರಾದರೂ ಹೊರಗೆ ಬಂದು ರಸ್ತೆಯಲ್ಲಿ ತಿರುಗಾಡಿದರೆ ಶಿಸ್ತುಕ್ರಮ ಜರುಗಿಸಲಾಗುವುದು :...










