ಕೊರೊನಾ ವೈರಸ್ ವಿರುದ್ಧ ಹೋರಾಡಲು ಪಿಎಂ ಪರಿಹಾರ ನಿಧಿಗೆ 1.30 ಕೋಟಿ ರೂ ದೇಣಿಗೆ ನೀಡಿದ ಸ್ಟಾರ್ ನಟ ವಿಜಯ್…

444
firstsuddi

ನವದೆಹಲಿ : ಮಹಾಮಾರಿ ಕೊರೊನಾ ವೈರಸ್ ವಿರುದ್ಧದ ಹೋರಾಟಕ್ಕೆ ಕಾಲಿವುಡ್‍ನ ಸ್ಟಾರ್ ನಟ ದಳಪತಿ ವಿಜಯ್ ಅವರು ಪ್ರಧಾನ ಮಂತ್ರಿ ಕೊರೊನಾ ಪರಿಹಾರ ನಿಧಿಗೆ 1.30 ಕೋಟಿ ರೂ ಹಣವನ್ನು ದೇಣಿಗೆಯಾಗಿ ನೀಡಿದ್ದಾರೆ. 1.30 ಕೋಟಿ ಹಣದಲ್ಲಿ ಪ್ರಧಾನ ಮಂತ್ರಿ ಕೊರೊನಾ ನಿಧಿಗೆ 25 ಲಕ್ಷ, ತಮಿಳುನಾಡು ಮುಖ್ಯಮಂತ್ರಿ ನಿಧಿಗೆ 50 ಲಕ್ಷ, ಚಿತ್ರ ಕಾರ್ಮಿಕರ ನಿಧಿಗೆ 25 ಲಕ್ಷ, ಕೇರಳ ಮುಖ್ಯಮಂತ್ರಿ ಕೊರೊನಾ ನಿಧಿಗೆ 10 ಲಕ್ಷ, ಹಾಗೂ ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ, ಪಾಂಡಿಚೆರಿ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ತಲಾ 5 ಲಕ್ಷ ರೂ ಹಣವನ್ನು ದೇಣಿಗೆಯಾಗಿ ನೀಡುವ ಮೂಲಕ ಮಾನವೀಯತೆ ಮೆರೆದಿದ್ದು, ವಿಜಯ್ ಅವರ ಈ ನಡೆಗೆ ಸಾಮಾಜಿಕ ಜಾಲತಾಣದಲ್ಲಿ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.