ಬಾಲಿವುಡ್‍ನ ಖ್ಯಾತ ನಟ ಇರ್ಫಾನ್ ಖಾನ್ ನಿಧನ…

160
firstsuddi

ಮುಂಬೈ : ಬಾಲಿವುಡ್‍ನ ಖ್ಯಾತ ನಟ ಇರ್ಫಾನ್ ಖಾನ್(54) ಅನಾರೋಗ್ಯದಿಂದ ಇಂದು ನಿಧನರಾಗಿದ್ದಾರೆ. ಇರ್ಫಾನ್ ಖಾನ್ ಅವರು ಕಳೆದ 2 ವರ್ಷಗಳಿಂದ ನ್ಯೂರೋ ಎಂಡೋಕೈನ್ ಟ್ಯೂಮರ್ ಎಂಬ ಕಾಯಿಲೆಯಿಂದ ಬಳಲುತ್ತಿದ್ದರು ಎನ್ನಲಾಗಿದ್ದು, ಕಳೆದ 2 ದಿನಗಳಿಂದ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದ್ದರಿಂದ ಅವರನ್ನು ಮುಂಬೈನ ಕೋಕಿಲಾಬೆನ್ ಧೀರೂಬಾಯಿ ಅಂಬಾನಿ ಆಸ್ಪತ್ರೆಯ ತೀವ್ರಾ ನಿಗಾ ಘಟಕದಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಇಂದು ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲೇ ಮೃತಪಟ್ಟಿದ್ದಾರೆ.