ಮೂಡಿಗೆರೆ : ಬಾಯಿ ಕ್ಯಾನ್ಸರ್ ನಿಂದ ಬಳಲುತ್ತಿದ್ದ ನಿರ್ಗತಿಕನ ಆರೈಕೆ ಮಾಡಿ ಅನಾಥಾಶ್ರಮಕ್ಕೆ ಕಳುಹಿಸಿದ ಸಾಮಾಜಿಕ ಕಾರ್ಯಕರ್ತ ಆರಿಫ್…

310
firstsuddi

ಕೊಟ್ಟಿಗೆಹಾರ: ಬಾಯಿ ಕ್ಯಾನ್ಸರ್ ನಿಂದ ಬಳಲುತ್ತಿರುವ ಚೇಗು ಗ್ರಾಮದ ನಿರ್ಗತಿಕ ಲೋಕಯ್ಯ ಅವರನ್ನು ಆರೈಕೆ ಮಾಡಿ ಬೆಂಗಳೂರಿನ ಅನಾಥಾಶ್ರಮಕ್ಕೆ ಕಳುಹಿಸಿಕೊಡಲಾಯಿತು. ಕಳೆದ ಕೆಲ ತಿಂಗಳಿಂದ ಬಾಯಿಯಲ್ಲಿ ಗಾಯದಂತಾಗಿ ರಕ್ತ ಒಸರುತ್ತಿತ್ತು. ಸಾಮಾಜಿಕ ಕಾರ್ಯಕರ್ತ ಆರೀಪ್, ಲೋಕಯ್ಯ ಅವರಿಗೆ ಸ್ನಾನ ಮಾಡಿಸಿ ಹೊಸ ಬಟ್ಟೆ ತೊಡಿಸಿ ಗಾಯಕ್ಕೆ ಔಷಧಿ ಹಚ್ಚಿ ನಿನ್ನೆ ರಾತ್ರಿ ಬೆಂಗಳೂರಿನ ಮಾರತಹಳ್ಳಿಯ ಕಾರುಣಾಶ್ರಯ ಅನಾಥಾಶ್ರಮಕ್ಕೆ ಕರೆದ್ಯೊಯ್ದರು. ಬಣಕಲ್ ಗ್ರಾ.ಪಂ ಮತ್ತು ಬಣಕಲ್‍ನ ಸಾರ್ವಜನಿಕರು ನೀಡಿದ ಧನಸಹಾಯದಿಂದ ವಾಹನದಲ್ಲಿ ಬೆಂಗಳೂರಿಗೆ ಕರೆದ್ಯೊಯಲಾಯಿತು.