ಚಿಕ್ಕಮಗಳೂರಿಗೂ ಲಗ್ಗೆಯಿಟ್ಟ ಮಿಡತೆಗಳು-ರೈತರಲ್ಲಿ ಆತಂಕ…!

275

ಚಿಕ್ಕಮಗಳೂರು : ರಾಜ್ಯದಲ್ಲಿ ಕೊರೊನಾ ಭೀತಿ ಹೆಚ್ಚಾಗುತ್ತಿರುವ ನಡುವೆ ಮಿಡತೆಗಳ ಹಾವಳಿ ಹೆಚ್ಚಾಗಿದ್ದು, ಬೆಳೆಗಾರರಲ್ಲಿ ಆತಂಕ ಸೃಷ್ಠಿಸುತ್ತಿದೆ. ಕಳೆದ ಕೆಲವು ದಿನಗಳ ಹಿಂದೆ ಕೋಲಾರದಲ್ಲಿ ಮಿಡತೆ ದಾಳಿಯಿಂದಾಗಿ ಅಪಾರ ಪ್ರಮಾಣದ ಬೆಳೆಗಳು ಹಾನಿಯಾಗಿದ್ದವು. ಈಗಾ ಚಿಕ್ಕಮಗಳೂರು ಜಿಲ್ಲೆಗೂ ಮಿಡತೆಗಳು ಲಗ್ಗೆಯಿಟ್ಟಿದ್ದು, ಜಿಲ್ಲೆಯ ಶೃಂಗೇರಿ ತಾಲ್ಲೂಕಿನ ತೆಕ್ಕೂರಿನಲ್ಲಿ ಅಡಕೆ ತೋಟಕ್ಕೆ ಮಿಡತೆಗಳು ದಾಳಿ ನಡೆಸಿ ಅಡಕೆ ಎಲೆಗಳನ್ನು ತಿಂದು ಹಾಕಿದ್ದು, ಮಲೆನಾಡಿನ ರೈತರಲ್ಲಿ ಆತಂಕ ಹೆಚ್ಚಾಗಿದೆ.