ಆಸ್ತಿ ವಿಚಾರಕ್ಕೆ ಜಗಳ-ಸುತ್ತಿಗೆಯಿಂದ ತಲೆಗೆ ಹೊಡೆದು ಮಗನನ್ನೇ ಹತ್ಯೆಗೈದ ತಂದೆ…

247
firstsuddi

ಹೈದರಾಬಾದ್ : ಆಸ್ತಿ ವಿಚಾರವಾಗಿ ತಂದೆಯೇ ತನ್ನ ಮಗನನ್ನು ಸುತ್ತಿಗೆಯಿಂದ ಹೊಡೆದು ಕೊಲೆ ಮಾಡಿರುವ ಘಟನೆ ಆಂಧ್ರಪ್ರದೇಶದ ವಿಶಾಖಪಟ್ಟಣಂನಲ್ಲಿ ನಡೆದಿದೆ. ಜಲರಾಜು(40) ಮೃತ ದುರ್ದೈವಿ ಎಂದು ಗುರುತಿಸಲಾಗಿದ್ದು, ಆರೋಪಿಯನ್ನು ವೀರರಾಜು ಎಂದು ಗುರುತಿಸಲಾಗಿದೆ. ನೌಕಾಪಡೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಜಲರಾಜು ಅವರು ರಜೆಯ ನಿಮಿತ್ತ ಊರಿಗೆ ಬಂದಿದ್ದರು. ಈ ವೇಳೆ ತಂದೆ ಹಾಗೂ ಮಗನ ನಡುವೆ ಆಸ್ತಿ ವಿಚಾರವಾಗಿ ಹಲವಾರು ಬಾರಿ ಜಗಳ ನಡೆದಿತ್ತು. ಜಗಳ ವಿಕೋಪಕ್ಕೆ ತಿರುಗಿ ಕಾರು ಪಾರ್ಕಿಂಗ್ ಜಾಗದಲ್ಲಿ ಸ್ಟೂಲ್ ಹಾಕಿಕೊಂಡು ಕುಳಿತಿದ್ದ ಮಗನನ್ನು ಗಮನಿಸಿದ ತಂದೆ ವೀರರಾಜು ಮಗನ ಬಳಿ ಸದ್ದಿಲ್ಲದೇ ಬಂದು ಸುತ್ತಿಗೆಯನ್ನು ತೆಗೆದುಕೊಂಡು ರಭಸವಾಗಿ ಹಲವು ಬಾರಿ ತಲೆಗೆ ಹೊಡೆದಿದ್ದು, ಸುತ್ತಿಗೆಯಿಂದ ಹೊಡೆಯುತ್ತಿದ್ದಂತೆ ಜಲರಾಜು ಅವರು ಪ್ರಜ್ಞಾಹೀನನಾಗಿ ಕೆಳಗೆ ಬಿದ್ದು ತೀವ್ರ ರಕ್ತಸ್ರಾವವಾಗಿ ಮೃತಪಟ್ಟಿದ್ದಾರೆ. ಸುತ್ತಿಗೆಯಲ್ಲಿ ಹೊಡೆಯುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಹತ್ಯೆಯ ಬಳಿಕ ವೀರರಾಜು ಅವರು ತಾನಾಗಿಯೇ ಪೊಲೀಸರಿಗೆ ಶರಣಾಗಿದ್ದು, ಪೊಲೀಸರು ವೀರರಾಜು ಅವರ ವಿರುದ್ಧ ಕೊಲೆ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿದ್ದಾರೆ.